

ಕೊಪ್ಪಳ: ಗವಿ ನಾಯಕ ಕೊಲೆ ಪ್ರಕರಣದಲ್ಲಿ ಪೊಲೀಸರು ಎಲ್ಲ ಆಯಾಮಗಳಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಒತ್ತಾಯಿಸಿದರು.
ಗವಿನಾಯಕ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿ ಮಾತನಾಡಿದರು. ಕೊಲೆ ಹಿಂದೆ ಕಾಣದ ಕೈಗಳಿವೆ ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಜನರ ನಡುವೆಯೇ ಕೊಲೆ ಮಾಡಿದ್ದು ಸಾಕಷ್ಟು ಅನುಮಾನ ಮೂಡಿಸಿದೆ. ಘೋರವಾಗಿ ಕೊಂದಿದ್ದು, ಆರೋಪಿಗಳಿಗೆ ಯಾರೋ ಸಾಥ್ ನೀಡಿದಂತೆ ಕಾಣುತ್ತದೆ. ಹೀಗಾಗಿ ಸೂಕ್ತ ತನಿಖೆಗೆ ಒಳಪಡಿಸುವುದು ಸೂಕ್ತ. ಎಲ್ಲ ಆಯಾಮಗಳಲ್ಲಿ ತನಿಖೆ ಆಗಲಿ. ಲಭ್ಯ ಸಾಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಸಲ್ಲಿಸಲಿ. ಹತ್ಯೆ ಮಾಡಿದವರಿಗೆ ಉಗ್ರ ಶಿೆ ಕೊಡಿಸಬೇಕು. ಕೊಪ್ಪಳ ಸೌಹಾರ್ದತೆಗೆ ಹೆಸರಾಗಿದೆ. ಇಲ್ಲಸಲ್ಲದ ಸುದ್ದಿ ಹಬ್ಬಿಸುವವರ ವಿರುದ್ಧವೂ ಕ್ರಮವಾಗಲಿ. ನಮ್ಮ ಪಕ್ಷ ನಾಯಕ ಕುಟುಂಬ ಪರವಾಗಿದೆ. ಅವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವವರು ಯಾರೇ ಆದರೂ ಕಠಿಣ ಶಿೆಯಾಗಬೇಕೆಂದು ಒತ್ತಾಯಿಸಿದರು.