ಮಕ್ಕಳಿಗೆ ಸಂಸ್ಕಾರ ಅವಶ್ಯ

district koppal gavimath school anival day celebration
Published on

ಕೊಪ್ಪಳ: ಮನೆಗಳೆಲ್ಲ ಮೊಬೈಲ್​ಮಯವಾಗಿದ್ದು, ಮಕ್ಕಳಿಗೆ ಸಂಸ್ಕಾರ, ಸಂಸತಿ ಕಲಿಸುವ ಅವಶ್ಯವಿದೆ ಎಂದು ನಿವೃತ್ತ ಶಿಕ್ಷಕ, ಶಿಕ್ಷಣ ತಜ್ಞ ಟಿ.ವಿ.ಮಾಗಳದ ಅಭಿಪ್ರಾಯಪಟ್ಟರು.

ನಗರದ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ 1993&94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಬುಧವಾರ ಹಮ್ಮಿಕೊಂಡಿದ್ದ ಗುರು ಗೌರವ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಪರಸ್ಪರ ಮಾತು, ಕುಶಲೋಪರಿ, ನೋವಿಗೆ ಸ್ಪಂದಿಸುವ ಪರಿಪಾಠ ಮಾಯವಾಗಿದೆ. ಈ ಸಮಯದಲ್ಲಿ 30 ವರ್ಷಗಳ ನಂತರ ಎಲ್ಲ ಒತ್ತಡಗಳನ್ನು ಬದಿಗಿರಿಸಿ ಕಾರ್ಯಕ್ರಮ ಮಾಡಿದ್ದೀರಿ. ಕಲಿತ ಶಾಲೆ ಅಭಿಮಾನ, ಜತೆಗೆ ಕಲಿತವರೊಂದಿಗೆ ಬೆರೆಯಲು ಕಾರ್ಯಕ್ರಮ ಆಯೋಜಿಸಿದ್ದು ಉತ್ತಮ ಕೆಲಸ. ಸಾಧನೆ ವಿದ್ಯಾರ್ಥಿ ಗೆಲುವು. ಆದರೆ, ವೈಲ್ಯ ಶಿಕ್ಷಕನಿಗೆ ಸೇರಲಿದೆ. ವಿದ್ಯಾರ್ಥಿಯನ್ನು ತಿದ್ದಿ, ಉತ್ತಮನನ್ನಾಗಿಸದಿರುವುದು ಗುರುವಿನ ವಿಲತೆ ಎನಿಸಿಕೊಳ್ಳಲಿದೆ ಎಂದರು.

ನಿವೃತ್ತ ಶಿಕ್ಷಕ ಗವಿಸಿದ್ದಪ್ಪ ಕೊಪ್ಪಳ ಮಾತನಾಡಿ, ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಸಂಸ್ಥೆ ನಡೆದು ಬಂದ ಹಾದಿ ಮತ್ತು ಶಿಕ್ಷಣ ಪರಂಪರೆ ಕುರಿತು ಮಾತನಾಡಿದರು.

ಕಾರ್ಯಕ್ರಮಕ್ಕು ಮುನ್ನ ವಿದ್ಯಾ ಗುರುಗಳನ್ನು ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಿಂದ ಗಡಿಯಾರ ಕಂಬ ಮಾರ್ಗವಾಗಿ ಗವಿಮಠ ರಸ್ತೆ ಮೂಲಕ ಶಾಲಾ ಆವರಣಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು.

ನಿವೃತ್ತ ಶಿಕ್ಷಕರಾದ ಪಿ.ಡಿ.ಬಡಿಗೇರ್​, ಬಿ.ವಿ.ರಾಮರೆಡ್ಡಿ , ವಿ.ಕೆ.ಜಾಗಟಗೇರಿ, ಗವಿಸಿದ್ದಪ್ಪ ಛಲವಾದಿ, ಎಸ್​.ಎಂ.ಕಂಬಾಳಿಮಠ, ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ಗುರುರಾಜ ಕುಲಕರ್ಣಿ, ರಮೇಶ ಬನ್ನಿಕೊಪ್ಪ, ಅಪ್ಪಣ್ಣ ಬೊಂದಾಡೆ, ನಾಗರಾಜ ಪರಡೇಕರ್​, ವೆಂಕಟೇಶ ಪಂಡ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net