

ಕೊಪ್ಪಳ: ನಗರದ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿ ಹೆಸರಿಡಲು ಪ್ರಸ್ತಾವನೆ ಸಲ್ಲಿಸುವಂತೆ ವಿವಿಧ ಸಂಘ-&ಸಂಸ್ಥೆ, ಸಂಘಟನೆಗಳ ಮುಖಂಡರು ಸಂಸದ ರಾಜಶೇಖರ ಹಿಟ್ನಾಳಗೆ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರು.
ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ ಮಾತನಾಡಿ, ಇದು ಗವಿಸಿದ್ದೇಶ್ವರ ನೆಲ. ಆರಾಧ್ಯ ದೈವ. ಎಲ್ಲ ಸಂ, ಸಂಸ್ಥೆಗಳು ಒಕ್ಕೋರಲಿನಿಂದ ಒಪ್ಪಿ ಆಗಮಿಸಿದ್ದೇವೆ. ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿ ಹೆಸರಿಡಬೇಕೆಂದು ಒತ್ತಾಯಿಸಿದರು.
ಕವಿಯತ್ರಿ ಸಾವಿತ್ರಿ ಮುಜುಮದಾರ ಮಾತನಾಡಿ, ಗವಿಸಿದ್ದೇಶ್ವರರ ಹೆಸರಿಡುವುದರಲ್ಲಿ ತಪ್ಪಿಲ್ಲ. ನಮ್ಮವರೇ ಆದ ನೀವು ಪ್ರಯತ್ನಿಸಬೇಕೆಂದರು.
ವೆಂಕಟೇಶ ಶ್ಯಾನಭಾಗ ಮಾತನಾಡಿ, ಗವಿಮಠ ದಾಸೋಹಕ್ಕೆ ಹೆಸರಾಗಿದೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದೆ. ಹೀಗಾಗಿ ಅದೇ ಹೆಸರನ್ನು ರೈಲು ನಿಲ್ದಾಣಕ್ಕಿಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಸಂಸದ ರಾಜಶೇಖರ ಹಿಟ್ನಾಳ, ಗವಿಮಠ ನಮ್ಮೆಲ್ಲರ ಹೆಮ್ಮೆ. ಸಿಎಂ ಜತೆ ಚರ್ಚಿಸಿ ನಿಮ್ಮೆಲ್ಲರ ಅಭಿಪ್ರಾಯ ತಿಳಿಸುವೆ. ರೈಲ್ವೆ ನಿಲ್ದಾಣಕ್ಕೆ ಗವಿಸಿದ್ದೇಶ್ವರರ ಹೆಸರಿಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ವರ್ತಕರ ಸಂದ ಜಿಲ್ಲಾಧ್ಯಕ್ಷ ಸಿದ್ದಣ್ಣ ನಾಲ್ವಾಡ, ಪ್ರಮುಖರಾದ ಮಲ್ಲಿಕಾರ್ಜುನ ಬಳ್ಳೊಳ್ಳಿ, ಪ್ರಭು ಹೆಬ್ಬಾಳ, ಪರಮೇಶ್ವರಪ್ಪ, ಗುರುರಾಜ ಹಲಗೇರಿ, ರಾಜಶೇಖರ ಆಡೂರ, ದಾನಪ್ಪ ಶೆಟ್ಟರ್, ಶಿವಕುಮಾರ ಕುಕನೂರ, ನಿರ್ಮಲಾ ಬಳ್ಳೊಳ್ಳಿ, ಜ್ಯೋತಿ ಕದ್ರಳ್ಳಿಮಠ, ಅಪರ್ಣ ಬಳ್ಳೊಳ್ಳಿ, ಸುಜಾತಾ ಹಲಗೇರಿ, ಪ್ರತಿಭಾ ಅಗಡಿ, ಸುಧಾ ಶೆಟ್ಟರ್, ಹೇಮಾ ಬೊಮ್ಮನಾಳ, ಶಾರದಾ ಗಣವಾರಿ, ಪರಿಮಳ ಹತ್ತಿ, ಸುಮಾ ಹಿರೇಮಠ, ಸೌಮ್ಯಾ ನಾಲ್ವಾಡ, ಚಂದಾ ಅಗಡಿ, ಅನುಸೂಯಾ ಮಟ್ಟಿ, ವಿಜಯಾ ಕೊರ್ಲಹಳ್ಳಿ ಇತರರಿದ್ದರು.