ರೈಲು ನಿಲ್ದಾಣಕ್ಕೆ ಗವಿಸಿದ್ದೇಶ್ವರ ಹೆಸರು ಬೇಡ

Published on

ಕೊಪ್ಪಳ: ನಗರದ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ದೇಶ್ವರ ಹೆಸರಿಡುವುದು ಬೇಡ. ಅದರ ಬದಲು ಈ ನೆಲಕ್ಕಾಗಿ ದುಡಿದ, ಮಡಿದ, ಸೇವೆ ಸಲ್ಲಿಸಿದವರ ಹೆಸರನ್ನಿಡುವಂತೆ ಗವಿಮಠ ಭಕ್ತರಲ್ಲಿ ಮನವಿ ಮಾಡಿದೆ.

ಕೊಪ್ಪಳ ನಿಲ್ದಾಣಕ್ಕೆ ಗವಿಸಿದ್ದೇಶ್ವರ ರೈಲು ನಿಲ್ದಾಣವೆಂದು ಹೆಸರಡಲು ಭಕ್ತರು, ಸಂ&ಸಂಸ್ಥೆಗಳು ಜನಪ್ರತಿನಿಧಿಗಳು, ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ವರದಿ ಬರುತ್ತಿವೆ. ಮೂರು ವರ್ಷದ ಹಿಂದೆಯೇ ರೈಲು ನಿಲ್ದಾಣಕ್ಕೆ ಗವಿಸಿದ್ದೇಶ್ವರರ ಹೆಸರಿಡುವಂತೆ ಅಭಿಯಾನ ಆರಂಭವಾಗಿತ್ತು. 2021ರ ಮಾರ್ಚ್​ 16ರಂದು ಮಠದಿಂದ ಬೇಡವೆಂದು ಸ್ಪಷ್ಟನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳ, ನಿಲ್ದಾಣ, ವಿಶ್ವ ವಿದ್ಯಾಲಯ, ವೃತ್ತಗಳಿಗೆ ಗವಿಸಿದ್ದೇಶ್ವರರ ಹೆಸರಿಡುವುದು ಬೇಡ.

ಯಾಕೆಂದರೆ, ಗವಿಸಿದ್ದೇಶ ನಿಮ್ಮ ಮನೆ, ಮನದ ದೇವರು. ಎಲ್ಲರ ಹೃದಯದಲ್ಲಿ ಆತನಿದ್ದುಮ ಪದೇ ಪಡೆ ಬೇಡದ ವಿಷಯ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಕೊಪ್ಪಳ ನಗರದ ಯಾವುದೇ ಸಾರ್ವಜನಿಕ ಸ್ಥಳಕ್ಕೆ ಈ ನೆಲಕ್ಕಾಗಿ ದುಡಿದ, ಮಡಿದ, ಸೇವೆ ಸಲ್ಲಿಸಿದ ಯಾವುದೇ ಮಹನೀಯರ ಹೆಸರಿಡಲಿ. ಅವರೆಲ್ಲರ ಹೃದಯದಲ್ಲಿ ಗವಿಸಿದ್ದೇಶ್ವರ ಇರುವಾಗ ಪ್ರತ್ಯೇಕಿಸಿ ನೋಡುವ ದೃಷ್ಟಿಕೋನ ಒಳ್ಳೆಯದಲ್ಲ. ಮುಂದೆಯೂ ಇಂಥ ಅನಗತ್ಯ ಕಾರ್ಯ ಮಾಡಬೇಡಿ. ಸಮಾಜದಲ್ಲಿ ಮಾಡಲು ಸಾವಿರಾರು ಪುಣ್ಯ ಕೆಲಸಗಳಿವೆ. ಅದು ಆತನ ಸೇವೆಯೆಂದೇ ಮಾಡೋಣ. ಆತನ ಹೆಸರು ನಿಮ್ಮ ಉಸಿರಲ್ಲಿರುವಾಗ ಮತ್ತೊಂದೆ ಹೆಸರೇಕೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net