ಅಜ್ಜನ ಜಾತ್ರೆಗೆ ಕ್ರೀಡಾ ಉತ್ಸವ, ಬಗೆ ಬಗೆ ಕ್ರೀಡಾಕೂಟ ಆಯೋಜನೆ

district koppal gavimath jaathra utsava sports
Published on

ಕೊಪ್ಪಳ: ನಗರದ ಗವಿಸಿದ್ದೇಶ್ವರ ಜಾತ್ರೋತ್ಸವ ವರ್ಷದಿಂದ ವರ್ಷಕ್ಕೆ ಮೆರಗು ಪಡೆಯುತ್ತಿದೆ. ಗವಿಮಠ, ಅಥ್ಲೆಟಿಕ್ಸ್​ ಅಸೋಸಿಯೇಷನ್​ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಮೊದಲ ಬಾರಿ ಗವಿಶ್ರೀ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗವುದೆಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದರು.

ವಿವಿಧೆಡೆಯಿಂದ ಲಾಂತರ ಜನರು ಜಾತ್ರೆ ವೀಕ್ಷಣೆಗೆ ಬರುತ್ತಾರೆ. ಪ್ರತಿ ವರ್ಷ ಮಠದಿಂದ ಕೆಲ ಕ್ರೀಡಾಕೂಟ ಆಯೋಜಿಸಲಾಗುತ್ತಿತ್ತು. ಗ್ರಾಮೀಣ ಕ್ರೀಡೆಗಳನ್ನು ಒಳಗೊಂಡು ಈ ಬಾರಿ ಕ್ರೀಡಾ ಉತ್ಸವ ಮಾಡುತ್ತಿದ್ದೇವೆ. ಪಾತೀತವಾಗಿ ಎಲ್ಲ ಜನರನ್ನು ಒಳಗೊಂಡು ಆಯೋಜಿಸುತ್ತಿದ್ದು, ಜಿಲ್ಲೆಯ ಜನರೆಲ್ಲ ಭಾಗಿಯಾಗಬೇಕು. ಎಲ್ಲರ ಸಹಕಾರ ಅಗತ್ಯ ಎಂದು ಮಂಗಳವಾರ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಪುರುಷ, ಮಹಿಳೆಯರಿಗಾಗಿ ವಾಲಿಬಾಲ್​, ಕಬಡ್ಡಿ, ಮ್ಯಾರಥಾನ್​, ಶೆಟಲ್​ ಬ್ಯಾಡ್ಮಿಂಟನ್​, ಛದ್ಮ ವೇಷ, ದೇಹದಾರ್ಡ್ಯ ಸ್ಪರ್ಧೆ ಇರಲಿದೆ. ಜತೆಗೆ ಹಗ್ಗ&ಜಗ್ಗಾಟ, ಎತ್ತಿನ ಬಂಡಿ ಶೃಂಗಾರ, ರಂಗೋಲಿ, ಥ್ರೋ ಬಾಲ್​, ಎತ್ತಿನ ಬಂಡಿ ಜಗ್ಗುವಿಕೆ, ಸಂಗ್ರಾಣಿ ಕಲ್ಲು ಎತ್ತುವುದು, ವಿಕಲಚೇತನರಿಗೆ ವಿಶೇಷವಾಗಿ ವಾಲಿಬಾಲ್​ ಪಂದ್ಯಾವಳಿ ಏರ್ಪಡಿಸಲಾಗುವುದು. ಇದರೊಂದಿಗೆ ಕ್ರಿಕೆಟ್​, ಗಾಳಿಪಟ, ಮಲ್ಲಕಂಬ, ಕುಸ್ತಿ ಪಂದ್ಯಾವಳಿಗರಲಿವೆ.

ವಿಜೇತರಿಗೆ ಬಹುಮಾನ ನೀಡಲಾಗುವುದು. 2025ರ ಜನೆವರಿ 14ರಿಂದ 17ವರೆಗೆ ಗವಿಮಠ ಆವರಣ ಮತ್ತು ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಇರಲಿವೆ. ನೋಂದಣಿ, ಭಾಗವಹಿಸುವಿಕೆ, ಸ್ಥಳ ಇನ್ನಿತರ ಮಾಹಿತಿ ಕೆಲ ದಿನಗಳಲ್ಲೇ ತಿಳಿಸಲಾಗುವುದೆಂದು ಹೇಳಿದರು. ಬಳಿಕ ಕ್ರೀಡಾ ಉತ್ಸವ ಲಾಂಛನ ಬಿಡುಗಡೆಗೊಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಸಂಚಾಲಕ ವಿರೇಶ ಮಹಾಂತಯ್ಯನಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net