ಗವಿಸಿದ್ದೇಶ್ವರ ಜಾತ್ರೆ ಜ.15ಕ್ಕೆ, ಸಿದ್ಧಗೊಳ್ಳುತ್ತಿರುವ ಮೈದಾನ

district koppal gavimath jaathra j.15
Published on

ಕೊಪ್ಪಳ: ದಣ ಕುಂಭ ಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರೋತ್ಸವ 2025ರ ಜನೆವರಿ 15ರಂದು ಜರುಗಲಿದೆ. ಪೂರ್ವಸಿದ್ಧತೆಗಳು ಭರದಿಂದ ಸಾಗಿದ್ದು, ರಥಬೀದಿ ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿದೆ.

ರಥೋತ್ಸವ ಸಾಗುವ ಮೈದಾನ ಹಾಗೂ ಅಂಗಡಿ ಹಾಕುವ ಜಾತ್ರಾ ಆವರಣವನ್ನು ಇಟ್ಯಾಚಿ, ಡೋಜರ್​,. ಜೆಸಿಬಿಗಳ ಮೂಲಕ ಸ್ವಚ್ಛಗೊಳಿಸಲಾಯಿತು. ಜನೆವರಿ 11ರಂದು ಸಂಜೆ 5 ಗಂಟೆಗೆ ಬಸವಪಟ ಆರೋಹಣ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. 12ರಂದು ಸಂಜೆ ಮಠದ ಆವರಣದ ಕೆರೆಯಲ್ಲಿ ತೆಪ್ಪೋತ್ಸವ ಇರಲಿದೆ. 13ರಂದು ಗವಿಸಿದ್ದೇಶ್ವರ ಮೂರ್ತಿ ಮೆರವಣಿಗೆ, 14ರಂದು ಕೈಲಾಸ ಮಂಟಪದಲ್ಲಿ ಅನ್ನಪೂರ್ಣೆಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಇರಲಿದೆ. ಸಂಜೆ ಲು ರಥೋತ್ಸವ, 15ರ ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗುವುದು.

ಬಳಿಕ ಕೈಲಾಸ ಮಂಟಪದಲ್ಲಿ ಮೂರು ದಿನಗಳ ಕಾಲ ಅನುಭಾವಿಗಳ ಅಮೃತ ಚಿಂತನಾಗೋಷ್ಠಿ ಕಾರ್ಯಕ್ರಮಗಳು ಜರುಗಲಿವೆ. 16ರಂದು ಸಂಜೆ ಮಠದ ಆವರಣದಲ್ಲಿ ಬಳಗಾನೂರು ಶ್ರೀ ಶಿವಶಾಂತವೀರ ಶರಣರಿಂದ ದೀರ್ದಂಡ ನಮಸ್ಕಾರ ಹಾಗೂ ಮದ್ದು ಸುಡುವ ಕಾರ್ಯಕ್ರಮ ಇದ್ದರೆ, 17ರಂದು ಕೈಲಾಸ ಮಂಟಪದಲ್ಲಿ ಸಮಾರೋಪ ಸಮಾರಂಭ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net