ಗವಿಶ್ರೀ ಜಾತ್ರೆಗೆ ಪದ್ಮಶ್ರೀ ವೆಂಕಟೇಶ ಕುಮಾರ್ ಚಾಲನೆ

IMG_20250105_100902
Published on

ಕೊಪ್ಪಳ: ದಕ್ಷಿಣ ಕುಂಭಮೇಳ ಖ್ಯಾತಿಯ ಕೊಪ್ಪಳದ‌ ಗವಿಸಿದ್ದೇಶ್ವರ ಜಾತ್ರೋತ್ಸವಕ್ಕೆ ಸುಪ್ರಸಿದ್ಧ ಹಿಂದೂಸ್ಥಾನಿ ಗಾಯಕರಾದ ಪಂಡಿತ್ ಪದ್ಮಶ್ರೀ ಎಂ.ವೆಂಕಟೇಶ ಕುಮಾರ್ ಚಾಲನೆ ನೀಡಲಿದ್ದಾರೆ.

ಜನೆವರಿ 15ರಂದು ಮಹಾರಥೋತ್ಸವ ಜರುಗಲಿದೆ. ಜ.16 ಹಾಗೂ 17ರಂದು ಮೂರು ದಿನಗಳ‌ ಕಾಲ ಜಾತ್ರೋತ್ಸವ ಕಾರ್ಯಕ್ರಮ ಜರುಗಲಿವೆ. ಮೂರು ದಿನ ನಾಡಿನ ವಿವಿಧ ಮಠಾಧೀಶರು,‌ ಗಣ್ಯರು ಭಾಗಿಯಾಗುವರು.

ಮೊದಲ ದಿನದ ಭಕ್ತ ಹಿತ ಚಿಂತನಾ ಸಭೆಗೆ ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗಿಯಾಗುವರು. ಎರಡನೇ ದಿನದ ಕಾರ್ಯಕ್ರಮಕ್ಕೆ ಅಸ್ಸಾಂನ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಪದ್ಮಶ್ರೀ ಜಾದವ್ ಪಾಯೆಂಗ್ ಆಗಮಿಸಲಿದ್ದಾರೆ‌.

ಇನ್ನೂ ಕೊನೆಯದ ದಿನದ ಸಮಾರೋಪ ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಾಧಿಶ ವಿ.ಶ್ರೀಶಾನಂದ ಸಮಾರೋಪ ನುಡಿ ಆಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net