ಕೊಪ್ಪಳ: ಗವಿ ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ಪೋಸ್ಟ್ ಮಾಡಿದ ಸಂಬಂಧ ನಗರಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಪಿಐ ಕೆ.ಜಯಪ್ರಕಾಶ್ ದೂರು ದಾಖಲಿಸಿದ್ದಾರೆ. ಕೊಪ್ಪಳದ ನಿರ್ಮಿತಿ ಕೇಂದ್ರ ಬಳಿಯ ಸೈಯದ್ ನದಿಮುಲ್ಲಾ ಖಾದ್ರಿ ಮಸೀದಿ ಬಳಿ ಆ.3ರಂದು ಗವಿನಾಯಕ ಕೊಲೆ ಆಗಿದೆ. ಈ ಸಂಬಂಧ ಸುದ್ದಿವಾಹಿನಿಯಲ್ಲಿ ಬಂದ ಸುದ್ದಿಗೆ ಹನಿ ರಿಯಾದ್ (ಜೀವನದ ಗೆಳೆಯ) ಹೆಸರಿನ ವ್ಯಕ್ತಿ "ಕೇಸರಿ ಜಿಹಾದ್ ಮಾಡಿದ್ರೆ ಇದೇ ಗತಿ' ಎಂದು ಪೋಸ್ಟ್ ಮಾಡಿದ್ದಾನೆ. ಸದ್ಯ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತೆ ೇಸ್ಬುಕ್ನಲ್ಲಿ ಉದ್ದೇಶಪೂರ್ವಕವಾಗಿ ಕಮೆಂಟ್ ಮಾಡಿದ್ದಾನೆ. ಇದರಿಂದ ಒಂದು ಕೋಮಿನ ಜನರು ಉದ್ರೇಕಗೊಂಡಿದ್ದಾರೆ. ಕೋಮುಗಳ ನಡುವಿನ ಸ್ವಾಸ್ಥ$್ಯ ಹಾಳಾಗಲಿದೆ. ಕಾನೂನು, ಸುವ್ಯವಸ್ಥೆಗೆ ಧಕ್ಕೆ ಬರಲಿದೆ. ಹೀಗಾಗಿ ಖಾತೆದಾರನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.