ಅಧಿಕಾರಿಗಳ ಭೇಟಿ, ಪರಿಶೀಲನೆ

district koppal gas leak case officers visit factory
Published on

ಕೊಪ್ಪಳ: ಟನೆ ಹಿನ್ನೆಲೆಯಲ್ಲಿ ಕಾರ್ಖಾನೆ ಮತ್ತು ಬಾಯ್ಲರ್​ ಇಲಾಖೆ ಅಧಿಕಾರಿಗಳು ಅಲ್ಲಾನಗರದ ಮೆ. ಕಾಮಿನಿ ಐರನ್​ & ಸ್ಟೀಲ್​ ಕಂಪನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಮಿಕ ಸಚಿವ ಸಂತೋಷ ಲಾಡ್​, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚನೆಯಂತೆ ಕಾರ್ಖಾನೆ ಉತ್ಪಾದನೆ ಸ್ಥಗಿತಕ್ಕೆ ಆದೇಶಿಸಿದರು.

ಟಕದ ಕ್ಲೀನರ್​&1ರಲ್ಲಿ ಜ.16ರಿಂದ ನಿರ್ವಹಣೆ ನಡೆಸಿದ್ದು, ಕೊನೇ ಹಂತದಲ್ಲಿ ಕಾರ್ಬನ್​ ಮೊನಾಕ್ಸ್​ಐಡ್​ ಸೇವಿಸಿ ಕಾರ್ಮಿಕ ಮೃತಪಟ್ಟಿದ್ದಾಗಿ ಮಾಹಿತಿ ಪಡೆದರು. ಮುನ್ನೆಚ್ಚರಿಕೆ ಕ್ರಮವಹಿಸಲು ಸೂಚಿಸಿದರು. ಕೈಗೊಂಡ ಕ್ರಮಗಳ ಬಗ್ಗೆ ಸುರಕ್ಷತಾ ಆಡಿಟ್​ ಮಾಡಿಸಿ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿಗೆ ವರದಿ ಸಲ್ಲಿಸಲು ತಿಳಿಸಿದರು. ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ಕಲ್ಪಿಸುವುದಾಗಿ ಕಾರ್ಖಾನೆಗಳು, ಬಾಯ್ಲರ್​ಗಳು, ಸುರಕ್ಷತಾ ಮತ್ತು ಸ್ವಾಸ್ಥ$್ಯ ಇಲಾಖೆ ಹುಬ್ಬಳ್ಳಿ ವಲಯ ನಿರ್ದೇಶಕ ರವೀಂದ್ರನಾಥ ಎನ್​.ರಾಠೋಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net