ನಿರ್ವಹಣೆ ಇಲ್ಲದೆ ಸೊರಗಿದ ಟಕ, ಆಗದ ತ್ಯಾಜ್ಯ ವಿಲೇವಾರಿ

district koppal garbage hosalli plant huligi
Published on

ವಿಜಯವಾಣಿ ವಿಶೇಷ ಕೊಪ್ಪಳ

ರಾಜ್ಯಕ್ಕೆ ಮಾದರಿಯಾಗಿರುವ ತಾಲೂಕಿನ ಹೊಸಳ್ಳಿ ಬಹುಗ್ರಾಮ ನ ತ್ಯಾಜ್ಯ ಸಂಸ್ಕರಣಾ ಟಕ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಟಕ ವ್ಯಾಪ್ತಿ ಪಂಚಾಯಿತಿಗಳು ಎಲ್ಲೆಂದರಲ್ಲಿ ತ್ಯಾಜ್ಯ ಹಾಕುತ್ತಿದ್ದು ಅಸ್ವಚ್ಛತೆ ಹೆಚ್ಚುತ್ತಿದೆ.

ಹೌದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆ ಟಕ ನಿರ್ವಹಣೆ ಮಾಡುತ್ತಿದೆ. ಪ್ರತ್ಯೇಕ ಸಮಿತಿ ರಚಿಸಿದ್ದು, ಜಿಪಂ ಮಾಜಿ ಅಧ್ಯಕ್ಷರಾಗಿದ್ದ ಹುಲಿಗಿ ಜನಾರ್ದನ ಅಧ್ಯಕ್ಷರಾಗಿ ಟಕ ಕಟ್ಟಿದ್ದರು. ಬಂದವರಿಗೆಲ್ಲ ಕಸದಿಂದ ರಸ ತೆಗೆವ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅವರು ಮರಣ ಹೊಂದಿದ್ದು, ಟಕ ನೋಡಿಕೊಳ್ಳುವವರು ಇಲ್ಲದಂತಾಗಿದೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛ, ಸುಂದರ ಪರಿಸರ ನಿರ್ಮಾಣ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೊಳಿಸುವ ಬಗೆ, ಗಲೀಜು ನೀರು ಶುದ್ಧೀಕರಿಸಿ ಮರು ಬಳಕೆ ಮಾಡುವ ಬಗ್ಗೆ ಮಾಹಿತಿ ಕೋಶವಾಗಿ ಟಕ ರಚಿಸಲಾಗಿದೆ.

ಹೊಸಳ್ಳಿ ಬಳಿ ಗುಡ್ಡದ 5 ಎಕರೆ ಪ್ರದೇಶದಲ್ಲಿ ಟಕ ಸ್ಥಾಪಿಸಲಾಗಿದೆ. ಮುನಿರಾಬಾದ್​ ಡ್ಯಾಂ, ಹಿಟ್ನಾಳ, ಹುಲಿಗಿ, ಶಿವಪುರ, ಅಗಳಕೇರಾ, ಹೊಸಬಂಡಿ ಹರ್ಲಾಪುರ, ಬಸಾಪುರ, ಬೂದಗುಂಪಾ, ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿ ಸಂಗ್ರಹವಾಗುವ ಕಸವನ್ನು ಟಕಕ್ಕೆ ತರಲಾಗುತ್ತಿತ್ತು. ಒಂಭತ್ತು ಗ್ರಾಪಂಗಳ ನಡುವೆ ಟಕ ನಿರ್ಮಿಸಲಾಗಿದೆ. ಸದ್ಯ ಟಕ ಕೆಲಸ ನಿಲ್ಲಿಸಿದ್ದು, ಆಯಾ ಪಂಚಾಯಿತಿ ವ್ಯಾಪ್ತಿಯ ಖಾಲಿ ಸ್ಥಳಗಳಲ್ಲಿ ತ್ಯಾಜ್ಯ ಹಾಕಲಾಗುತ್ತಿದೆ. ಇದರಿಂದ ಅನೈರ್ಮಲ್ಯ ಹೆಚ್ಚುತ್ತಿದ್ದು, ಸ್ವಚ್ಛ ಭಾರತ್​ ಮಿಷಿನ್​ ಯೋಜನೆ ಹಳ್ಳ ಹಿಡಿಯುವಂತಾಗಿದೆ. ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಸ್ವಚ್ಛ ಸಂಕೀರ್ಣ, ಸ್ವಚ್ಛ ವಾಹಿನಿ, ಸ್ವಚ್ಛತಾ ಕಾರ್ಯ ಹೆಸರಿನಲ್ಲಿ ಆಯಾ ಗ್ರಾಪಂಗಳು ಮನೆ ಮನೆಯಿಂದ ಕಸ ಸಂಗ್ರಹಿಸುತ್ತಿವೆ. ವಾಹನದೊಟ್ಟಿಗೆ ಸಿಬ್ಬಂದಿ ತೆರಳುತ್ತಿದ್ದಾರೆ. ಈ ಮೊದಲು ಸಂಗ್ರಹಗೊಂಡ ಕಸವನ್ನು ಹೊಸಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕ್ಕೆ ತರಲಾಗುತ್ತಿತ್ತು. ಪ್ಲಾಸ್ಟಿಕ್​, ಒಣ, ಹಸಿ ಕಸ ಪ್ರತ್ಯೇಕಿಸಲಾಗುತ್ತಿತ್ತು. ಗೊಬ್ಬರ, ಮರು ಬಳಕೆ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಎಲ್ಲ ತ್ಯಾಜ್ಯ ವೈಜ್ಞಾನಿಕವಾಗಿ ಸಂಸ್ಕರಿಸಿ ಪರಿಸರಕ್ಕೆ ಧಕ್ಕೆಯಾಗದಂತೆ ಕ್ರಮವಹಿಸಳಾಗುತ್ತಿತ್ತು. ಸದ್ಯ ಎಲ್ಲ ಗ್ರಾಪಂಗಳು ಕಸ ಸಂಗ್ರಹಿಸಿದರೂ ಸೂಕ್ತ ವಿಲೇವಾರಿ ಆಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದು, ಟಕ ಸ್ಥಾಪನೆ ಉದ್ದೇಶವೇ ಬುಡಮೇಲಾಗಿದೆ.

ಕಸಮಯವಾದ ಹುಲಿಗಿ

ನಾಡಿನ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದಲ್ಲೂ ಅಸ್ವಚ್ಛತೆ ಹೆಚ್ಚಿದೆ. ದೇವಸ್ಥಾನಕ್ಕೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ರಾಜ್ಯ, ಅಂತಾರಾಜ್ಯಗಳಿಂದ ಲಾಂತರ ಭಕ್ತರು ಆಗಮಿಸುತ್ತಾರೆ. ಈ ಮೊದಲು ದೇವಾಲಯ ತ್ಯಾಜ್ಯವನ್ನು ಹೊಸಳ್ಳಿ ಟಕಕ್ಕೆ ಕಳಿಸಲಾಗುತ್ತಿತ್ತು. ಇದೀಗ ಜೀವನಾಡಿ ತುಂಗಭದ್ರಾ ನದಿ ದಡದಲ್ಲಿ ಕಸದ ರಾಶಿ ಹಾಕಲಾಗುತ್ತಿದೆ. ಇದರಿಂದ ನದಿ ನೀರು ಕಲುಷಿತಗೊಳ್ಳಲು ದಾರಿ ಮಾಡಿದಂತಾಗಿದೆ. ಜಲಚರಗಳಿಗೂ ಸಂಕಷ್ಟ ಎದುರಾಗಲಿದೆ. ಅಸ್ವಚ್ಛತೆ ಹೆಚ್ಚಿ ಪರಿಸರ ಹಾನಿ ಆಗುವ ಜತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಾಧಿಕಾರ, ಜಿಲ್ಲಾಡಳಿತ ಸೂಕ್ತ ಕ್ರಮವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net