ಸಂಘ ಪರಿವಾರ ವಿರುದ್ಧ ಪೋಸ್ಟ್:ಸ್ವಯಂ ಪ್ರೇರಿತ ದೂರು ದಾಖಲು

district-koppal-gangavathi-rss-fir-communal-clash
Published on

ಕೊಪ್ಪಳ: ಸಂಘ ಪರಿವಾರವನ್ನು ಭಯೋತ್ಪಾದಕ ಸಂಘಟನೆ ಎಂದು ಜರಿದು‌‌‌ ಸಾಮಾಜಿಕ‌ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಅಮೀರ್ ಅಮ್ಮು ಎಂಬ ವ್ಯಕ್ತಿ ಇನ್ಸ್ಟಾಗ್ರಾಂನಲ್ಲಿ ಆರ್ ಎಸ್ಎಸ್ ಸಂಘಟನೆ ಬಗ್ಗೆ ಪೋಸ್ಟ್ ಮಾಡಿದ್ದಾನೆ. ಇತ್ತೀಚೆಗೆ ಗಂಗಾವತಿಯಲ್ಲಿ ಅಂಧ ಮುಸ್ಲಿಂ ವ್ಯಕ್ತಿಗೆ ಕೆಲ ಕಿಡಿಗೇಡಿಗಳು ಜೈ ಶ್ರೀರಾಮ್ ಎಂದು ಹೇಳುವಂತೆ ಹಲ್ಲೆ ಮಾಡಿ ಹಣ ದೋಚಿದ್ದರು.

ವೃದ್ಧನ ವಿಷಯ ಹಾಗೂ ಫೋಟೋ ಹಾಕಿ ಸಂಘ ಪರಿವಾರ ಜಗತ್ತಿನಲ್ಲಿಯೇ ಅತಿದೊಡ್ಡ ಭಯೋತ್ಪಾದಕ ಸಂಘಟನೆ. ವಯಸ್ಸಾದ ವೃದ್ಧನ ಮೇಲೆ ಹಲ್ಲೆ ಮಾಡಿ ಜೈ ಶ್ರೀರಾಮ್ ಹೇಳಿಸಿ ಹಣ ದೋಚಿದ್ದೀರಾ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಗಂಗಾವತಿ ಕೋಮು ಸೂಕ್ಷ್ಮ ನಗರವಾಗಿದ್ದು, ಇಂಥ ಪೋಸ್ಟ್ ಗಳಿಂದ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net