ಆಸ್ಪತ್ರೆಯಲ್ಲಿ ಕಳ್ಳತನ ಮಾಡಿದವರಿಗೆ 3ವರ್ಷ ಶಿಕ್ಷೆ

Published on

ಕೊಪ್ಪಳ: ಗಂಗಾವತಿ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಕಳ್ಳತನ ಮಾಡಿದ್ದ ನಾಲ್ವರು ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಗಂಗಾವತಿ ಪ್ರಧಾನ ಸಿವಿಲ್​ ಮತ್ತು ಜೆ.ಎಂ.ಎ್​.ಸಿ.ನ್ಯಾಯಾಲಯ ಸೆ.24ರಂದು ಆದೇಶಿಸಿದೆ.

ಅಬ್ದುಲ್​ ಸಮೀರ್​, ಮಂಜುನಾಥ, ಅಲ್ತ್​ಾ ಮತ್ತು ಖಾಜಾಪಾಷಾ ಶಿೆಗೆ ಗುರಿಯಾದವರು.

ಇವರು 2023 ಆಗಸ್ಟ್​ 18 ರಂದು ಗಂಗಾವತಿ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ನುಗ್ಗಿದ್ದರು. ಆಸ್ಪತ್ರೆಯಲ್ಲಿನ ಮಾಡ್ಯುಲರ್​ ಶಸ್ತ್ರ ಚಿಕಿತ್ಸೆ ಕೊಠಡಿಯ 40 ಸಾವಿರ ರೂ.ಮೌಲ್ಯದ ಎ.ಸಿಂ ಕಾಪರ್​ ಪೈಪ್​ಲೈನ್​, ಮುಖ್ಯ ವೈದ್ಯಾಧಿಕಾರಿ ಕೊಠಡಿಯ 6 ಸಾವಿರ ರೂ. ಮೌಲ್ಯದ 2 ಟನ್​ ಎಸಿ 4 ಮೀ. ಕಾಪರ್​ ಲೈಪ್​ಲೈನ್​, ಲಿಕ್ವಿಡ್​ ಬ್ಯಾಂಕಿನ 50 ಸಾವಿರ ರೂ.ಮೌಲ್ಯದ 40 ಅಡಿ ಉದ್ದದ 42 ಎಂ.ಎಂ. ಕಾಪರ್​ ಪೈಪ್​ಲೈನ್​, ಆಕ್ಸಿಜನ್​ ಜನರೇಷನ್​ ಪ್ಲಾಂಟ್​ನ 50 ಸಾವಿರ ಮೌಲ್ಯದ 40 ಅಡಿ ಉದ್ದದ 42 ಎಂಎಂ ಕಾಪರ್​ ಪೈಪ್​ಲೈನ್​, ಆಕ್ಸಿಜನ್​ ಮ್ಯಾನಿಪೋಲ್ಡ್​ ಕೊಠಡಿಯಲ್ಲಿ 25 ಸಾವಿರ ರೂ.ಮೌಲ್ಯದ ಕಾಪರ್​ ಟೆಲ್​ ಪೈಪುಗಳು ಒಳಗೊಂಡು 1,71,000ರೂ. ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದರು.

ಈ ಬಗ್ಗೆ ಗಂಗಾವತಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖಾಧಿಕಾರಿ ಕಾಮಣ್ಣ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗೇಶ ಪಾಟೀಲ್​ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳೆಂದು ತೀರ್ಮಾನಿಸಿದ್ದಾರೆ. ಐಪಿಸಿ ಸೆಕ್ಷನ್​ 380ರಡಿ ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ ತಲಾ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನ ಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದಾರೆ. ಗಂಗಾವತಿ ನಗರ ಠಾಣೆ ಪೊಲೀಸ್​ ಸಿಬ್ಬಂದಿ ಶುಭಾಷ, ಯಮನೂರಪ್ಪ, ಭೀಮಣ್ಣ, ಯಲ್ಲರೆಡ್ಡಿ ನ್ಯಾಯಾಲಯಕ್ಕೆ ಸಾಗಳನ್ನು ಹಾಜರುಪಡಿಸಿ ಸಹಕರಿಸಿದ್ದಾಗಿ ಗಂಗಾವತಿ ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net