ಕೊಪ್ಪಳ: ಪೊಲೀಸರ ಮೇಲೆ ಹಲ್ಲೆ ನಡೆಸಿದ ಮೂವರ ವಿರುದ್ಧದ ಆರೋಪ ಸಾಬೀತಾಗಿದ್ದು, 10 ತಿಂಗಳು ಶಿಕ್ಷೆ ವಿಧಿಸಿ ಗಂಗಾವತಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಅರ್ಬಾಜ್ಖಾನ್, ಅರ್ಬಾಜ್ ಖಾಜಿ ಹಾಗೂ ಹುಸೇನ್ ರಜಾಕ್ ಶೇಖ್ ಶಿೆಗೆ ಗುರಿಯಾದವರು. 2021ರ ಮಾರ್ಚ್ 27ರಂದು ಗಂಗಾವತಿಯ ಮಹಾವೀರ ಸರ್ಕಲ್ ಹತ್ತಿರ ಮೂವರು ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿ, ದೈಹಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಐ ವೆಂಕಟಸ್ವಾಮಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ ಅವರು ಸಾಕ್ಷಿ ಮತ್ತು ದಾಖಲೆಗಳನ್ನು ಪರಿಶೀಲಿಸಿ ಆರೋಪಿಗಳು ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ. ಭಾರತೀಯ ದಂಡ ಸಂಹಿತೆ ಕಲಂ 323 ಅಪರಾಧಕ್ಕೆ 6 ತಿಂಗಳ ಕಾರಾಗೃಹ ಶಿೆ ಮತ್ತು 1,000ರೂ. ದಂಡ ವಿಧಿಸಲಾಗಿದೆ. ದಂಡ ನೀಡದಿದ್ದರೆ ಹೆಚ್ಚುವರಿ 15 ದಿನ ಸೆರೆವಾಸ ಅನುಭವಿಸಬೇಕು. ಐಪಿಸಿ 504 ಅಪರಾಧಕ್ಕೆ 1 ತಿಂಗಳ ಶಿಕ್ಷೆ ಹಾಗೂ 300ರೂ. ದಂಡ ಹಾಕಲಾಗಿದೆ. ದಂಡ ಪಾವತಿಸದಿದ್ದರೆ 3 ದಿನ ಸಾದಾ ಸೆರೆವಾಸ ಅನುಭವಿಸಬೇಕು. ಐಪಿಸಿ 506 ಅಪರಾಧಕ್ಕೆ 3 ತಿಂಗಳ ಶಿಕ್ಷೆ ಹಾಗೂ 500ರೂ. ದಂಡ ಹಾಕಿದ್ದು, ದಂಡ ಕೊಡದಿದ್ದಲ್ಲಿ 7 ದಿವಸ ಸಾದಾರಣ ಶಿೆ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರಿ ಅಭಿಯೋಜಕಿ ನಾಗಲಕ್ಷಿ$್ಮ ಎಸ್. ವಾದ ಮಂಡಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ನಾಯ್ಕ, ವಿಶ್ವನಾಥ ಸಾಗಳನ್ನು ಹಾಜರುಪಡಿಸಿ ಸಹಕರಿಸಿದ್ದಾಗಿ ಗಂಗಾವತಿ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.