

ಕೊಪ್ಪಳ : ಗಂಗಾವತಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವೆಂಕಟೇಶ್ ಕೊಲೆ ನಡೆವ ಮುನ್ನ ಆರೋಪಿ ರವಿ ಹಾಗೂ ವೆಂಕಟೇಶ ದೂರವಾಣಿಯಲ್ಲಿ ಪರಸ್ಪರ ಜಗಳ ಆಡಿಕೊಂಡಿದ್ದರು. ಇವರಿಬ್ಬರ ಆಡಿಯೋ ಸಂಭಾಷಣೆ ಸದ್ಯ ವೈರಲ್ ಆಗಿದೆ.
ಹಳೇ ದ್ವೇಷಕ್ಕೆ ಕೊಲೆ ನಡೆದಿದ್ದು ನಾಲ್ವರು ಆರೋಪಿಗಳು ಶರಣಾಗಿದ್ದಾರೆ. ಕೊಲೆ ಸಂಚಿಗೂ ಮೊದಲು ಟಾಕ್ ವಾರ್ ನಡೆಸಿದ್ದ ವೆಂಕಟೇಶ-ರವಿ ಪರಸ್ಪರ ಅವಾಚ್ಯ ಶಬ್ದ ಬಳಸಿ ನಿಂದಿಸಿಕೊಂಡಿದ್ದಾರೆ. ಒಂದು ನೀ ಇರಬೇಕು. ಇಲ್ಲ ನಾನಿರಬೇಕು. ಅಪ್ಪನಿಗೆ ಹುಟ್ಟಿದ್ದರೆ ಹೊರಗೆ ಬಾ ನೋಡಿಕೊಳ್ಳುವೆ. ನಿನ್ನ ಜೊತೆಗಿರು ಬಚ್ಚಾ ಹುಡುಗನಿಂದಲೇ ನಿನ್ನ ಮುಗಿಸುತ್ತೇನೆ. ನಾನು ಬರುವುದು ಬೇಕಿಲ್ಲ. ಮೊದಲು ಅವನಿಂದ ಪಾರಾಗುವ ಎಂದು ರವಿ ವೆಂಕಟೇಶನಿಗೆ ಸವಾಲು ಹಾಕಿದ್ದಾನೆ.
ಈ ಬೆನ್ನಲ್ಲೇ ವೆಂಕಟೇಶ ಕೊಲೆಯಾಗಿದೆ. ಊಟಕ್ಕೆ ತೆರಳಿದ್ದ ವೆಂಕಟೇಶ ಹಾಗೂ ಸಹಚರರು ಬುಧವಾರ ಬೆಳಗ್ಗೆ ಗಂಗಾವತಿಗೆ ಬಂದಿದ್ದಾರೆ. ಹಿಂದೆಯೇ ಹಿಂಬಾಲಿಸಿಕೊಂಡು ಬಂದ ರವಿ ಗ್ಯಾಂಗ್ ಹುಡುಗರು ವೆಂಕಟೇಶ ಇದ್ದ ಬೈಕಿಗೆ ಕಾರಿನಿಂದ ಅಪಘಾತ ಮಾಡಿದ್ದಾರೆ. ಕೆಳಗೆ ಬೀಳುತ್ತಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.