ಅಧಿಕ ಬೆಲೆ ರಸಗೊಬ್ಬರ ಸೇಲ್​, 4 ಅಂಗಡಿಗಳ ಲೈಸೆನ್ಸ್​ ರದ್ದು

district koppal furtilizers ride agreeculture jda
Published on

ಕೊಪ್ಪಳ: ರಸಗೊಬ್ಬರ ನಿಯಂಯತ್ರಣ ಆದೇಶ ಉಲ್ಲಂನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾದ್ಯಂತ 4 ಟ್ರೇಡಿಂಗ್​ ಕಂಪನಿಗಳ ಮಾರಾಟ ಪರವಾನಗಿ ರದ್ದುಗೊಳಿಸಿ ಕೃಷಿ ಇಲಾಖೆ ಅಧಿಕಾರಿಗಳು ಆದೇಶಿಸಿದ್ದಾರೆ.

ರಸಗೊಬ್ಬರ ನಿಯಂತ್ರಣ ಆದೇಶ 1985 ರ ಕ್ಲಾಸ್​ 3, 4, 5, 8 ಮತ್ತು 35 ರ ಉಲ್ಲಂಘನೆಗಳಿಗಾಗಿ ಕೊಪ್ಪಳದ ಎಸ್​.ಜಿ.ಗಂಜ್​ನ ಶ್ರೀ ನಾಗರಾಜ ಟ್ರೇಡಿಂಗ್​ ಕಂಪನಿ ರಸಗೊಬ್ಬರ ಮಾರಾಟ ಪರವಾನಿಗೆ ಅಮಾನತುಗೊಳಿಸಲಾಗಿದೆ. ಕನಕಗಿರಿಯ ತಾವರಗೇರಾ ರಸ್ತೆಯ ಲಲಿತಾ ಟ್ರೇಡರ್ಸ್​ ಮಳಿಗೆ ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಕ್ಕಾಗಿ ಪರವಾನಗಿ ಕಳೆದುಕೊಂಡಿದೆ. ಕಾರಟಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಶ್ರೀ ಸಪ್ತಗಿರಿ ಟ್ರೇಡರ್ಸ್​ ಹಾಗೂ ಗಂಗಾವತಿಯ ಅದಿತಿ ಏಜೇನ್ಸಿಸ್​ ಪರವಾನಗಿ ರದ್ದುಗೊಳಿಸಲಾಗಿದೆ.

ಪ್ರಕರಣ ವಿವರ: ರೈತ ಮಂಜುನಾಥ ಕೆ. ಹಕಾರಿ ಎಂಬುವರು ಕೊಪ್ಪಳದ ನಾಗಾರಾಜ ಟ್ರೇಡಿಂಗ್​ ಕಂಪನಿಯಲ್ಲಿ ಅಧಿಕ ಬೆಲೆಗೆ ಯೂರಿಯಾ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಸೆಟ್​ರೈಟ್​ ಲಿಂಕ್​ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದರು. ಪೂರಕ ವಿಡಿಯೋ ಸಾಾಧಾರಗಳನ್ನು ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಗಡಿಗೆ ಭೇಟಿ ನೀಡಿದ ಕೃಷಿ ಜಾಗೃತದಳ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಸಹಾಯಕ ನಿರ್ದೇಶಕ ಸುನಿಲ್​ ಕುಮಾರ್​ ಎಂ.ಟಿ., ಕೃಷಿ ಅಧಿಕಾರಿ ಮುತ್ತಣ್ಣ ಈಳಿಗೇರ, ವಿಶ್ವನಾಥ ಬಗನಾಳ, ಕೊಪ್ಪಳ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಸದ್ದಾಂ ಹುಸೇನ್​ ಜು.8ರಂದು ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಈ ವೇಳೆ ರಸಗೊಬ್ಬರ ದಾಸ್ತಾನು, ಮಾರಾಟ ವಿವರ, ಬೆಲೆಗಳ ನಾಮಲಕ ಅಳವಡಿಸದಿರುವುದು ಪತ್ತೆಯಾಗಿದೆ. ಗೊಬ್ಬರ ಖರೀದಿಸಿದವರಿಗೆ ಎ ಬಿಲ್​ ನೀಡಿಲ್ಲ. ಬೇರೆ ಬೇರೆ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆ ಕಂಪನಿಗಳ ಮಾರಾಟ ಪರವಾನಗಿ ಪಡೆದಿಲ್ಲ. ಕೆಲವು ಅವಧಿ ಮುಕ್ತಾಯಗೊಂಡಿವೆ. ಹೆಚ್ಚಿನ ಬೆಲೆಗೆ ಯೂರಿಯಾ ಮಾರಾಟ ಮಾಡಿಲ್ಲ. ಬದಲಿಗೆ ಅಂಗಡಿ ಸಹಾಯಕ ವಿಶ್ವನಾಥ 350ರೂ. ಎಂದು ಹೇಳಿದ್ದಾನೆಂದು ತಪು$್ಪ ಒಪ್ಪಿಕೊಂಡಿದ್ದಾರೆ.

ಪ್ರಕರಣ ಸಂಬಂಧ ನೀಡಿದ ನೋಟಿಸ್​ಗೂ ಸಮಂಜಸವಾದ ಉತ್ತರ ನೀಡಿಲ್ಲ. ರೈತರಿಗೆ ಖರೀದಿ ಸಮಯದಲ್ಲಿ ಬಿಲ್​ ನೀಡದೇ, ಅಧಿಕಾರಿಗಳು ಭೇಟಿ ನೀಡಿದಾಗ ಬಿಲ್​ ನೀಡಿದ್ದಾರೆ. ಹೀಗಾಗಿ ರಸಗೊಬ್ಬರ (ಸಾವಯವ, ನಿರವಯವ ಅಥವಾ ಮಿಶ್ರಿತ) ನಿಯಂತ್ರಣ ಆದೇಶ 1985 ಕ್ಲಾಸ್​ 3, 4, 5, 8, 35 ಮತ್ತು ಅಗತ್ಯ ವಸ್ತುಗಳ ಕಾನೂನು 1955ರ ಕಲಂ 8 ಮತ್ತು 9 ರ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು ಸ್ಪಷ್ಟವಾಗಿದೆ. ಶ್ರೀ ನಾಗರಾಜ ಟ್ರೇಡಿಂಗ್​ ಕಂಪನಿ, ಎಸ್​.ಜಿ ಗಂಜ್​, ಕೊಪ್ಪಳ (ನೋಂದಣಿ ಸಂಖ್ಯೆ : ಎಡಿಎ /7/ಎ್​ಇ19-2044947/2020-&2021 ರಸಗೊಬ್ಬರ ಮಾರಾಟ ಮಳಿಗೆಯ ಪರವಾನಿಗೆ (ಲೈಸನ್ಸ್​)ಯನ್ನು ಕ್ಲಾಸ್​ 31(2)ರ ಪ್ರಕಾರ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net