ಕೊಪ್ಪಳ: ಮೀನುಗಾರಿಕೆ ಇಲಾಖೆಯಿಂದ 2024-25ನೇ ಸಾಲಿಗೆ ಕೊಪ್ಪಳ, ಕುಕನೂರು ಹಾಗೂ ಯಲಬುರ್ಗಾ ತಾಲೂಕುಗಳ ಮೀನುಗಾರರಿಗೆ ಹಾಗೂ ಮೀನು ಕೃಷಿಕರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬ್ಯಾಂಕ್ ಸಾಲ ಸೌಲಭ್ಯ ಒದಗಿಸಿ ಮೀನುಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ವಿತರಿಸಲಾಗುವುದು. ಜನತಾ ಸಾಮೂಹಿಕ ಅಪಘಾತ ವಿಮಾ ಯೋಜನೆಯಡಿ (ಜಿಎಐಎಸ್) ಮೀನುಗಾರರನ್ನು ನೋಂದಾಯಿಸಬೇಕಿದ್ದು, ನ.25ರೊಳಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಸಹಾಯಕ ನಿರ್ದೇಶಕರ ಕಚೇರಿ ಕೊಪ್ಪಳದಿಂದ ಅರ್ಜಿ ಪಡೆದು ಸಲ್ಲಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.