

ಕೊಪ್ಪಳ: ರಸಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರೆದಿದೆ. ನಗರದ ಟಿಎಪಿಸಿಎಂಎಸ್ ಕಚೇರಿ ಮುಂದೆ ಗೊಬ್ಬರ ಪಡೆಯಲು ಟೋಕನ್ ವಿತರಿಸಲು ನೂಕುನುಗ್ಗಲು ಕಂಡುಬಂತು.
ಯೂರಿಯಾ ಗೊಬ್ಬರದ ಬೇಡಿಕೆ ಕಡಿಮೆಯಾಗಿಲ್ಲ. ಮಳೆ ಮುಂದುವರೆದಿದ್ದು, ಮೆಕ್ಕೆಜೋಳ ಸೇರಿ ಇತರ ಬೆಳೆಗಳಿಗೂ ಯೂರಿಯಾ ಅವಶ್ಯವಿದೆ. ಹೀಗಾಗಿ ನಿತ್ಯ ರೈತರು ಗೊಬ್ಬರ ಕೊಳ್ಳಲು ಕಚೇರಿ ಮುಂದೆ ಜಮಾಯಿಸುತ್ತಿದ್ದಾರೆ. ಬುಧವಾರ ಟಿಎಪಿಸಿಎಂಎಸ್ಗೆ 46 ಟನ್ನಷ್ಟು ಯೂರಿಯಾ ಬಂದಿದೆ. ಗುರುವಾರ ವಿತರಣೆಗೆ ಯೋಜಿಸಲಾಗಿದೆ. ಬುಧವಾರ ಬಂದ ರೈತರಿಗೆ ಟೋಕನ್ ನೀಡಲಾಯಿತು. 400 ರೈತರಿಗೆ ನೀಡಲು ಯೋಜಿಸಿದ್ದು, ಸಾವಿರಾರು ರೈತರು ಜಮಾಯಿಸಿದರು. ಕಚೇರಿಯಿಂದ ಬಸವೇಶ್ವರ ವೃತ್ತವರೆಗೆ ಸರತಿ ಸಾಲು ಕಂಡುಬಂತು. ಟೋಕನ್ ಕೊಳ್ಳಲು ಅನ್ನದಾತರು ಮುಗಿಬಿದ್ದರು.
ಇದರಿಂದ ಗದ್ದಲ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ವತ@ ಎಸ್ಪಿ ಡಾ.ರಾಮ್ ಎಲ್. ಅರಸಿದ್ದು, ಅಪರ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಡಿವೈಎಸ್ಪಿ, ಸೈಬರ್ ಠಾಣೆ ಡಿವೈಎಸ್ಪಿ, ನಗರಠಾಣೆ ಪಿಐ ಸೇರಿ ಇತರ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹೆಣಗಾಡಿದರು. ಬ್ಯಾರಿಕೇಡ್ ಅಳವಡಿಸಿ ಗದ್ದಲ ನಿಯಂತ್ರಿಸಿದರು. ಬೆಳಗ್ಗೆಯಿಂದ ಸಂಜೆವರೆಗೆ ಬಂದ ರೈತರಿಗೆಲ್ಲ ಟೋಕನ್ ನೀಡಿ ಕಳಿಸಲಾಯಿತು.