ಗೊಬ್ಬರಕ್ಕೆ ಮುಂದುವರಿದ ಪರದಾಟ

district koppal fertilisers shortfall farmers
Published on

ಕೊಪ್ಪಳ: ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರೆದಿದೆ. ಬುಧವಾರವೂ ನಗರದ ಟಿಎಪಿಸಿಎಂಎಸ್​ ಮುಂಭಾಗದಲ್ಲಿ ನೂರಾರು ಅನ್ನದಾತರು ರಸಗೊಬ್ಬರಕ್ಕೆ ಮುಗಿಬಿದ್ದಿದ್ದು ಕಂಡುಬಂತು.

ಬೆಳಗ್ಗೆಯೇ ಆಗಮಿಸಿದ ಕೃಷಿಕರು ಸರತಿಯಲ್ಲಿ ನಿಂತರು. ಯುವಕರು, ಪುರುಷರು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಸಾಲಿನಲ್ಲಿ ನಿಂತಿದ್ದರು. ಗಂಟೆಗಟ್ಟಲೇ ನಿಂತು ಸಾಕಾದ ವೃದ್ಧರು, ಮಹಿಳೆಯರು ಸ್ಥಳದಲ್ಲೇ ಕುಳಿತಿದ್ದು ಕಂಡುಬಂತು. ರಸಗೊಬ್ಬರ ಬರುತ್ತಿದ್ದಂತೆಯೇ ಕೊಂಡೊಯ್ದರು. ನಿರಂತರ ಮಳೆ ಆಗುತ್ತಿದ್ದು ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ದ್ವಿಗುಣಗೊಂಡಿದೆ. ಹೀಗಿದ್ದರೂ ಕೃಷಿ ಅಧಿಕಾರಿಗಳು ಗೊಬ್ಬರ ಕೊರತೆ ಇಲ್ಲ ಎನ್ನುತ್ತಿದ್ದಾರೆ. ರೈತರ ಬೇಡಿಕೆಗೆ ತಕ್ಕಂತೆ ಪೂರೈಸುವ ಬದಲು ಅಂಕಿ&ಅಂಶ ನೀಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ.

ಕೊರತೆ ಇಲ್ಲ: ಈ ವಾರ ನ್ಯಾಷನಲ್​ ರ್ಟಿಲೈಸರ್ಸ್​ ಲಿಮಿಟೆಡ್​, ಕೋರಮಂಡಲ ಇಂರ್ಟನ್ಯಾಷನಲ್​ ಲಿಮಿಟೆಡ್​ ಹಾಗೂ ಕ್ರಿಬೊಕ್​ ರ್ಟಿಲೈಸರ್ಸ್​ ಲಿಮಿಟೆಡ್​ನಿಂದ 3,136.73 ಟನ್​ ಯೂರಿಯಾ ಜಿಲ್ಲೆಗೆ ಪೂರೈಕೆಯಾಗಿದೆ. ಕೊಪ್ಪಳ ತಾಲೂಕಿಗೆ 629 ಟನ್​, ಕುಷ್ಟಗಿ 296 ಟನ್​, ಯಲಬುರ್ಗಾ 421 ಟನ್​, ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕಿಗೆ 1,816.05 ಟನ್​ ಹಂಚಿಕೆ ಮಾಡಲಾಗಿದೆ. ಸ್ಪೆಸ್​, ಎಂಎ್​ಎಲ್​ ಮತ್ತು ಆರ್​ಸಿಎ್​ ಕಂಪನಿಯಿಂದ 5 ಸಾವಿರ ಟನ್​ ಪೂರೈಕೆಯಾಗಲಿದೆ. ರೈತರು ನ್ಯಾನೋ ಯೂರಿಯಾ ಬಳಕೆ ಮಾಡಬಹುದು. ಕಡ್ಡಾಯವಾಗಿ ಬಿಲ್​ ಪಡೆಯುವಂತೆ ಜಂಟಿ ಕೃಷಿ ನಿದೇಶಕ ರುದ್ರೇಶಪ್ಪ ಟಿ.ಎಸ್​.ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net