ಅಧಿಕಾರ ದರಕ್ಕೆ ಗೊಬ್ಬರ ಮಾರಾಟ ಮಾಡದಿರಿ, ಡಿಸಿ ಡಾ.ಸುರೇಶ ಬಿ. ಇಟ್ನಾಳ ಸೂಚನೆ

district koppal fertiliser dc suresh itnal meeting
Published on

ಕೊಪ್ಪಳ: ಜಿಲ್ಲೆಯಲ್ಲಿ ರಸಗೊಬ್ಬರ ಮಾರಾಟಗಾರರು ಅಧಿಕ ದರಕ್ಕೆ ಮಾರಾಟ ಮಾಡುವುದು, ಅನಧಿಕೃತವಾಗಿ ದಾಸ್ತಾನು ಮಾಡುವಂತಿಲ್ಲವೆಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ರಸಗೊಬ್ಬರ ಕಂಪನಿ, ಕರ್ನಾಟಕ ಮಾರ್ಕೆಟಿಂಗ್​ ಫೆಡರೇಶನ್​, ರಾಜ್ಯ ಬೀಜ ನಿಗಮ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ರಸಗೊಬ್ಬರದೊಂದಿಗೆ ಜೈವಿಕ ಉತ್ತೇಜಕಗಳು, ಕೀಟನಾಶಕ ಹಾಗೂ ಉಪ ಪೋಷಕಾಂಶ ಕೊಳ್ಳುವಂತೆ ಒತ್ತಡ ಹೇರುವಂತಿಲ್ಲ. ನಿಯಮಾನುಸಾರ ಮಾರಾಟ ಮಾಡಿ. ನಾನು ಕನಕಗಿರಿ, ಕಾರಟಗಿ ಹಾಗೂ ಕುಷ್ಟಗಿ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿರುವೆ. ಅಧಿಕ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ರೈತರು ದೂರುತ್ತಿದ್ದಾರೆ. ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಬೇಡಿಕೆಯಂತೆ ಜಿಲ್ಲೆಗೆ ರಸಗೊಬ್ಬರ ಬರುತ್ತಿದೆ. ಕಳೆದೊಂದು ವಾರದಲ್ಲಿ 3,150 ಟನ್​ ಯೂರಿಯಾ ಬಂದಿದೆ. ಮುಂದಿನ ವಾರದಲ್ಲಿ 5 ಸಾವಿರ ಟನ್​ ಬರಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ.

ನ್ಯಾನೋ ಯೂರಿಯಾ, ಡಿಎಪಿ ರಸಗೊಬ್ಬರ ಬಳಕೆಗೆ ರೈತರು ಆದ್ಯತೆ ನೀಡಲಿ. ಈ ಬಗ್ಗೆ ರಸಗೊಬ್ಬರ ಕಂಪನಿಯಗಳು ಕೃಷಿ ಅಧಿಕಾರಿಗಳೊಂದಿಗೆ ಜಾಗೃತಿ ಮೂಡಿಸಿ. ಪ್ರಾತ್ಯಕೆ ಏರ್ಪಡಿಸಿ. ನ್ಯಾನೋ ಯೂರಿಯಾ, ಡಿಎಪಿ ಬಳಕೆ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಇಲ್ಲ. ಈ ಬಗ್ಗೆ ಅರಿವು ಮೂಡಿಸುವಂತೆ ತಾಕೀತು ಮಾಡಿದರು. ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​. ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net