ಕೊಪ್ಪಳದ ಕ್ರೀಡಾಪಟು ಆಫ್ರೀನಾ ಬಾನುಗೆ ಸನ್ಮಾನ

district koppal felicitation to scay champion afreena bhanu sports person sports department
felicitation to scay champion aafreena bhanu sports person
ಸ್ಕ್ವಾಯ್ ಗೇಮ್​ನಲ್ಲಿ ಚಾಂಪಿಯನ್​ ಆದ ಕ್ರೀಡಾಪಟು ಆಫ್ರೀನಾ ಬಾನು ಅವರನ್ನು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್​ ಸನ್ಮಾನಿಸಿದರು. ತರಬೇತುದಾರ ಮಂಜುನಾಥ ಇದ್ದರು.
Published on

ಕೊಪ್ಪಳ: ಸ್ಕ್ವಾಯ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ ತಾಲೂಕಿನ ಬೆಳಗಟ್ಟಿ ಗ್ರಾಮದ ಆಫ್ರೀನಾ ಬಾನುಗೆ ಕ್ರೀಡಾ ಇಲಾಖೆಯಿಂದ ಶುಕ್ರವಾರ ಸನ್ಮಾನಿಸಲಾಯಿತು.

ಯುವತಿ ಮುಂಡರಗಿಯ ಮಂಜು ಡೈಮೆಂಡ್​ ಮಿಕ್ಸ್​ ಮಾರ್ಷಲ್​ ಆರ್ಟ್ಸ್​ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು, ಜಿಲ್ಲೆ, ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಯಕ್ತಿಕ ಹಾಗೂ ಗುಂಪು ಸ್ಫರ್ಧೆಗಳಲ್ಲಿ ಪ್ರಥಮ/ದ್ವೀತಿಯ ಸಾಧನೆ ಪಡೆದು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

2022ನೇ ಸಾಲಿನ ಜಿಲ್ಲಾ ಮಟ್ಟದ ಸ್ಕ್ವಾಯ್​ ಮಾರ್ಷಲ್​ ಆರ್ಟ್ಸ್​ನಲ್ಲಿ ಚಿನ್ನದ ಪದಕ, ಹಾಸನದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್​ಶಿಪ್​ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾಳೆ.

2023ರ ಫೆಬ್ರವರಿಯಲ್ಲಿ ನೇಪಾಳದಲ್ಲಿ ನಡೆದ ಸ್ಕ್ವಾಯ್​ ಸೌಥ್​ ಏಷ್ಯನ್​ ಚಾಂಪಿಯನ್​ಶಿಪ್​ನ ಗುಂಪು ಸ್ಪರ್ಧೆಯಲ್ಲೂ ಚಿನ್ನದ ಪದಕ ಪಡೆದಿದ್ದಾಳೆ. ಛತ್ತೀಸ್​ಗಡದಲ್ಲಿ ಜರುಗಿದ ಕೇಂದ್ರ ಸರ್ಕಾರದ ಏಕ್​ ಭಾರತ್​ ಶ್ರೇಷ್ಠ ಭಾರತ್​ (ವಿಭಾಗ- 1) ಅಡಿ ಚಿನ್ನದ ಪದಕ, ಗೋವಾದಲ್ಲಿ ನಡೆದ 37ನೇ ನ್ಯಾಷನಲ್​ ಗೇಮ್​ನಲ್ಲಿ ಬೆಳ್ಳಿ ಪದಕ ಮತ್ತು ವೈಯಕ್ತಿಕ ಏರೋದಲ್ಲಿ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾಳೆ.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್​ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net