ಫ್ಯಾಶನ್​ ಡಿಸೈನರ್​ ತರಬೇತಿಗೆ ಅರ್ಜಿ ಆಹ್ವಾನ

Published on

ಕೊಪ್ಪಳ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2024&-25ನೇ ಸಾಲಿನಲ್ಲಿ ಮಹಿಳಾ ತರಬೇತಿ ಯೋಜನೆಯಡಿ ನಿರುದ್ಯೋಗಿ ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮ ನೀಡಲು ಗಂಗಾವತಿಯ ಮೆಟ್ರೋ ಸೋಷಿಯಲ್​ ಎಜುಕೇಷನ್​ ಟ್ರಸ್ಟ್​ ಸಂಸ್ಥೆಯಿಂದ ಅಸಿಸ್ಟೆಂಟ್​ ಫ್ಯಾಶನ್​ ಡಿಸೈನರ್​ ತರಬೇತಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕನಿಷ್ಟ 10ನೇ ತರಗತಿ ಮುಗಿಸಿದ 18 ರಿಂದ 35 ವರ್ಷದೊಳಗಿನ ಆಸಕ್ತ ಅರ್ಹ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಜೂ.21ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಮೆಟ್ರೋ ಸೋಷಿಯಲ್​ ಎಜುಕೇಷನ್​ ಟ್ರಸ್ಟ್​, ಪ್ರಶಾಂತ ನಗರ, ಗಂಗಾವತಿ, ಜಿ.ಕೊಪ್ಪಳ ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net