ಪರಿಹಾರ ನೀಡಲು ರೈತರ ಆಗ್ರಹ

Farmer protest in halageri village koppal district about composation
ಭೂ ಪರಿಹಾರಕ್ಕೆ ಆಗ್ರಹಿಸಿ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು. ರೈತರಾದ ವರುಣ ಕುಮಾರ್​ ನಿಟ್ಟಾಲಿ, ಹನುಮಂತ ಹಳ್ಳಿಕೇರಿ, ಗುಡದಪ್ಪ ಬನಪ್ಪನ್ನವರ್​, ಬಸಪ್ಪ ಬನಪ್ಪನ್ನವರ್​, ಮಂಜುನಾಥ ಹಂಚಿನಾಳ, ಬಸವರಾಜ ಹಡಪದ, ದೇವಪ್ಪ, ಕರಿಯಪ್ಪ ಹಳ್ಳಿಕೇರಿ, ಶಿವಕುಮಾರ್​ ಹೂಗಾರ ಇದ್ದರು.
Published on

ಕೊಪ್ಪಳ: ಪರಿಹಾರ ನೀಡದೇ ಜಮೀನಿನಲ್ಲಿ ವಿದ್ಯುತ್​ ಕಂಬ ಅಳವಡಿಸುತ್ತಿರುವ ಖಾಸಗಿ ವಿದ್ಯುತ್​ ಕಂಪನಿ ಕ್ರಮ ಖಂಡಿಸಿ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸೋಮವಾರ ರೈತರು ದಿಢೀರ್​ ಪ್ರತಿಭಟನೆ ನಡೆಸಿದರು.

ಹಲಗೇರಿ, ವೀರಾಪುರ, ಲಕಮಾಪುರ ಸೇರಿ ಸುತ್ತಲಿನ ಗ್ರಾಮದ ಜಮೀನುಗಳಲ್ಲಿ ಸೆರೆಟಿಕಾ ರಿನಿವೇಬಲ್ಸ್​ ಇಂಡಿಯಾ 1ಪೆವೆಟ್​ ಲಿಮಿಟೆಡ್​ ಕಂಪನಿ 220/110 ಕೆ.ವಿ.ವಿದ್ಯುತ್​ ಮಾರ್ಗ ಮತ್ತು ಟವರ್​ ನಿಮಾರ್ಣ ಮಾಡುತ್ತಿದೆ. ಆದರೆ, ಕಾಮಗಾರಿಗೆ ಅನುಮತಿ ಪಡೆದಿಲ್ಲ. ಜಮೀನು ನೀಡಿದ ರೈತರಿಗೆ ಪರಿಹಾರ ಬಂದಿಲ್ಲ. ಹೀಗಿದ್ದರೂ ಕಾಮಗಾರಿ ನಡೆಸುತ್ತಿದ್ದಾರೆ. ಪರಿಹಾರ ನೀಡದೆ ಕಾಮಗಾರಿ ಪೂರ್ಣಗೊಳಿಸಿದಲ್ಲಿ ಮಂದೆ ಸಿಗುವ ಭರವಸೆ ಇಲ್ಲ. ಜಮೀನು ಮಾರಾಟಕ್ಕೂ ತೊಂದರೆ ಆಗಲಿದೆ ಎಂದು ಆರೋಪಿಸಿದರು.

ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಅಲ್ಲಿವರೆಗೂ ಕಾಮಗಾರಿ ನಡೆಸಬಾರದೆಂದು ಆಗ್ರಹಿಸಿದರು. ಕಂಪನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಟವರ್​ ಅಳವಡಿಕೆಗೆ ಆಗಮಿಸಿದ್ದ ಕಂಪನಿ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಅಧಿಕಾರಿಗಳು ಸ್ಥಳದಿಂದ ತೆರಳಿದರು.

ರೈತರಾದ ವರುಣ ಕುಮಾರ್​ ನಿಟ್ಟಾಲಿ, ಹನುಮಂತ ಹಳ್ಳಿಕೇರಿ, ಗುಡದಪ್ಪ ಬನಪ್ಪನ್ನವರ್​, ಬಸಪ್ಪ ಬನಪ್ಪನ್ನವರ್​, ಮಂಜುನಾಥ ಹಂಚಿನಾಳ, ಬಸವರಾಜ ಹಡಪದ, ದೇವಪ್ಪ, ಕರಿಯಪ್ಪ ಹಳ್ಳಿಕೇರಿ, ಶಿವಕುಮಾರ್​ ಹೂಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net