ಅಬಕಾರಿ ನಿರೀಕ್ಷಕನ ಮನೆ ಮೇಲೆ ಲೋಕಾ ದಾಳಿ

district koppal exaise department inspector lokayukta raid
Published on

ಕೊಪ್ಪಳ: ನಗರದ ಅಬಕಾರಿ ನಿರೀಕ್ಷಕ ರಮೇಶ ಅಗಡಿ ಮನೆ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು.

ಕಳೆದ ಹಲವು ವರ್ಷಗಳಿಂದ ರಮೇಶ ಅಬಕಾರಿ ನಿರೀಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಂಚ ಪಡೆವ ಬಗ್ಗೆ ಅನೇಕ ಆರೋಪಗಳು ಕೇಳಿ ಬಂದಿದ್ದವು. ಮದ್ಯ ಮಾರಾಟಗಾರರು ಹಾಗೂ ಜನಪ್ರತಿನಿಧಿಗಳಿಂದಲೂ ದೂರು ಸಲ್ಲಿಕೆಯಾಗಿದ್ದವು. 2022ರಲ್ಲಿ ಜಿಪಂ ಕೆಡಿಪಿ ಸಭೆಯಲ್ಲಿ ಸಚಿವರ ಸೂಚನೆ ಮೇರೆಗೆ ಅಮಾನತಿಗೂ ಶಿಾರಸ್ಸು ಮಾಡಿ ಕರ್ತವ್ಯದಿಂದ ಬಿಡುಡಗೆ ಮಾಡಿದ ಟನೆಯೂ ನಡೆದಿದೆ.

ಬೆಳಗ್ಗೆ ಕೊಪ್ಪಳದ ಗೋವನಕೊಪ್ಪ ಆಸ್ಪತ್ರೆ ಹಿಂಭಾಗದ ಬಾಡಿಗೆ ಮನೆ, ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದ ತೋಟದ ಮನೆ, ಹೊಸಪೇಟೆಯಲ್ಲಿನ ಸ್ನೇಹಿತನ ಮನೆ ಹಾಗೂ ಅಬಕಾರಿ ಕಚೇರಿಯಲ್ಲಿ ಏಕ ಕಾಲಕ್ಕೆ ದಾಳಿ ನಡೆದಿದೆ. ರಾಯಚೂರು ಲೋಕಾಯುಕ್ತ ಎಸ್ಪಿ ಶಶಿಧರ ಎಂ.ಎನ್​. ಮಾರ್ಗದರ್ಶನದಲ್ಲಿ ಪಿಐ ಸುನಿಲ್​ ಕುಮಾರ್​ ಹಾಗೂ ಇತರರ ತಂಡ ದಾಳಿ ನಡೆಸಿದೆ. ಬೆಳಗ್ಗೆಯಿಂದ ಸಂಜೆವರೆಗೆ ದಾಖಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಹಲವು ಕಡತ ವಶಕ್ಕೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net