ಕಾರ್ಖಾನೆ ವಿರೋಧಿ ಹೋರಾಟಕ್ಕೆ ಎಚ್​ಡಿಡಿ ಬೆಂಬಲ

district koppal ex prime minister devegouda mahantayyanamath
Published on

ಕೊಪ್ಪಳ: ಬಿಎಸ್​ಪಿಎಲ್​ ಕಾರ್ಖಾನೆ ಆರಂಭಕ್ಕೆ ವಿರೋಧಿಸಿ ಹೋರಾಟ ನಡೆದಿದ್ದು ಬೆಂಬಲ ನೀಡುವಂತೆ ಜೆಡಿಎಸ್​ ರಾಜ್ಯಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಎಚ್​ಡಿಡಿ ಬೆಂಬಲ ನೀಡಿದ್ದಾರೆ.

ಕಾರ್ಖಾನೆ ಆರಂಭಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ಸರ್ವಪಕ್ಷ ನಿಯೋಗ ಸಿಎಂ ಭೇಟಿಯಾಗಿ ಮನಿವಿ ಸಲ್ಲಿಸಿದೆ. ನೀವು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ ಸಚಿವ ಭೂಪೇಂದ್ರ ಯಾದವ ಅವರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಪರಿಸರ ಇಲಾಖೆಯಿಂದ ಕಾರ್ಖಾನೆಗೆ ಅನುಮತಿ ನೀಡದಂತೆ ಮನವರಿಕೆ ಮಾಡಬೇಕು ಎಂದು ಮಹಾಂತಯ್ಯನಮಠ ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಎಚ್​ಡಿಡಿ, ಕಾರ್ಖಾನೆ ನಿಮಾರ್ಣಕ್ಕೆ ಗವಿಶ್ರೀಗಳ ನೇತೃತ್ವದಲ್ಲಿ ಎಲ್ಲಾ ಧರ್ಮ ಗುರುಗಳು, ಸಂಘಟನೆಗಳು, ಜನ ವಿರೋಧಿಸಿರುವುದನ್ನು ಗಮನಿಸಿದ್ದೇನೆ. ಸಿಎಂ ಸಹ ಮೌಖಿಕ ಆದೇಶ ಮಾಡಿದ್ದಾರೆ. ಈ ಬಗ್ಗೆ ನಾನೂ ಕೇಂದ್ರ ಪರಿಸರ ಹಾಗೂ ಹವಾಮಾನ ಇಲಾಖೆ ಸಚಿವರೊಂದಿಗೆ ಮಾತನಾಡುವೆ. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದ್ದು, ಕೊಪ್ಪಳ ಜಿಲ್ಲೆಯ ಜನರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net