ಜಿಲ್ಲಾದ್ಯಂತ ಪರಿಸರ ಕಾಳಜಿ ಮೆರಗು

district koppal envoironment day celebration
Published on

ಕೊಪ್ಪಳ: ಸಕಲ ಜೀವ ರಾಶಿ ಪೋಷಿಸುವುದು ಪ್ರಕೃತಿ. ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಹೇಳಿದರು.

ಡಿಯುಡಿಸಿ ಹಾಗೂ ನಗರಸಭೆಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ಲಾಸ್ಟಿಕ್​ ಜಾಗತಿಕ ಸಮಸ್ಯೆಯಾಗುತ್ತಿದೆ. ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಅದನ್ನು ಉಳಿಸುವ ಕೆಲಸ ನಾವು ಮಾಡಬೇಕು. ಸರ್ಕಾರದ ಮೇಲೆ ಜವಾಬ್ದಾರಿ ಹೇರದೇ ನಮ್ಮ ಮನೆ ಮುಂದೆ ಒಂದೊಂದು ಗಿಡ ಬೆಳೆಸೋಣ. ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳೋಣ. ಅಸ್ವಚ್ಛತೆ ರೋಗಗಳಿಗೆ ಆಹ್ವಾನ ನೀಡುತ್ತದೆ ಎಂದರು.

ನಗರಸಭೆ ಉಪಾಧ್ಯೆ ಅಶ್ವಿನಿ ಗದುಗಿನಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಬಸಯ್ಯ ಸ್ವಾಮಿ ಹಿರೇಮಠ, ಸದಸ್ಯ ಅಕ್ಬರ್​ ಪಾಷಾ, ಆಶ್ರಯ ಸಮಿತಿ ಸದಸ್ಯರಾದ ಪರಶುರಾಮ ಕೆರೆಹಳ್ಳಿ, ಪದ್ಮಾವತಿ ಕಾಂಬಳೆ, ಎಇಇ ಜಯಶೀಲ, ಪ್ರಮುಖರಾದ ಸಲೀಂ ದೇದಾರ್​, ಮೆಹಬೂಬ್​ ಅರಗಂಜಿ ಇತರರಿದ್ದರು.

ಕಿಮ್ಸ್​ನಲ್ಲಿ ಚಿಗುರು ಸಂಭ್ರಮ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗುರುವಾರ ನಗರದ ಕಿಮ್ಸ್​ನಲ್ಲಿ ಚಿಗುರು ಸಂಭ್ರಮ ಕಾರ್ಯಕ್ರಮ ನಡೆಯಿತು. ನಿರ್ದೇಶಕ ಡಾ.ವಿಜಯನಾಥ ಇಟಗಿ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಆವರಣದಲ್ಲಿ ನಿರ್ದೇಶಕರು, ವೈದ್ಯರು ಹಾಗೂ ವೈದ್ಯಕಿಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಸಿ ನೆಟ್ಟರು. ವಿದ್ಯಾರ್ಥಿಗಳು ರಚಿಸಿದ ಪರಿಸರ ಕಾಳಜಿಯ ಬಗೆಗಿನ ಪೋಸ್ಟರ್​ಗಳನ್ನು ಪ್ರದರ್ಶಿಸಲಾಯಿತು. ಪರಿಸರದ ಬಗ್ಗೆ ಕ್ವಿಜ್​ ಸ್ಪರ್ಧೆ ನಡೆಸಲಾಯಿತು.

ಸಸಿ ನೆಟ್ಟು ಆಚರಣೆ

ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಗಣ್ಯರು ಸಸಿ ನೆಟ್ಟರು. ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ, ಎಸ್​ಡಿಎಂಸಿ ಅಧ್ಯಕ್ಷ ಮಂಜುನಾಥ ಕುರಿ, ಗ್ರಾಪಂ ಸದಸ್ಯ ಮಹಮ್ಮದ ರಫಿ, ಎಸ್​ಡಿಎಂಸಿ ಸದಸ್ಯರಾದ ರಾಜಾಸಾಬ್​ ಹಾದರಮಗ್ಗಿ, ದರಿಯಾಸಾಬ ಕಾತರಕಿ, ಸಿಆರ್​ಪಿ ಹನುಮಂತಪ್ಪ ಕುರಿ, ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ, ಶಿಕ್ಷರಾದ ಭಾರತಿ ಹವಳೆ, ಜ್ಯೋತಿಲಕ್ಷಿ$್ಮ, ಭಾರತಿ ಉಪಾಧ್ಯಾಯ, ಪೂರ್ಣಿಮಾ ತುಪ್ಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net