ಇರುವ ಒಂದೇ ಭೂಮಿ ರಕ್ಷಿಸೋಣ

district koppal environmet day celebration sfs school halagera village
Published on

ಕೊಪ್ಪಳ: ಭೂಮಿ ಇರುವುದೊಂದೆ. ಅದನ್ನು ರಕ್ಷಿಸೋಣ. ಇಲ್ಲದಿದ್ದರೆ ನಾವೆಲ್ಲ ಬದುಕುವುದು ಕಷ್ಟವಾಗಲಿದೆ ಎಂದು ಪರಿಸರ ತಜ್ಞ ಶ್ರೀಪಾದರಾಜ ಮುರಡಿ ಹೇಳಿದರು.

ನಗರದ ಎಸ್​ಎ್​ಎಸ್​ ಶಾಲೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದು ಕೇವಲ ಆಚರಣೆಯಲ್ಲ. ಪರಿಸರದ ಬಗ್ಗೆ ಆಳವಾಗಿ ಯೋಚಿಸಲು, ನಾವು ಮಾಡುತ್ತಿರುವ ತಪ್ಪುಗಳನ್ನು ತಿದ್ದುಕೊಳ್ಳಲು ಮತ್ತು ನಮ್ಮ ಭೂಮಿಯನ್ನು ಉಳಿಸಲು ಇರುವ ಅವಕಾಶ. ನಮ್ಮ ಪೂರ್ವಜರು ನಮಗೆ ನೀಡಿರುವ ಅಮೂಲ್ಯ ಸಂಪತ್ತು ಭೂಮಿ. ಶುದ್ಧ ಗಾಳಿ, ತಿಳಿನೀರು, ಹಚ್ಚ ಹಸಿರಿನ ಕಾಡುಗಳು ಮತ್ತು ವೈವಿಧ್ಯಮಯ ಜೀವರಾಶಿಗಳು ನಮ್ಮ ಬದುಕಿಗೆ ಆಧಾರ ಎಂದರು.

ಪ್ರಾಚಾರ್ಯ ಫಾದರ್​ ಜಬಮಲೈ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಪಡೆಯುವುದು ಎಷ್ಟು ಮಹತ್ವವೋ ಪರಿಸರ ಉಳಿಸುವುದು ಅಷ್ಟೇ ಮುಖ್ಯ. ಪಾಲಕರು ಮಕ್ಕಳಿಗೆ ಪರಿಸರ ಪ್ರೇಮ ಬೆಳೆಸಬೇಕು. ವಾರದಲ್ಲಿ ಒಂದು ದಿನವನ್ನು ಪರಿಸರಕ್ಕಾಗಿ ಮೀಸಲಿಡಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮ ಅಂಗವಾಗಿ 150 ಸಸಿ ನಡೆಲಾಯಿತು. ಮಕ್ಕಳು ಪರಿಸರ ಜಾಗೃತಿ ನೃತ್ಯ ರೂಪಕ ಪ್ರದರ್ಶಿಸಿದರು. ಸಂಸ್ಥೆಯ ವ್ಯವಸ್ಥಾಪಕ ಫಾದರ್​ ಮ್ಯಾಥ್ಯು ಮಾಮ್ಲ, ಮುಖ್ಯ ಅತಿಥಿ ೋಟೋ ರ್ಜನಲಿಸ್ಟ್​ ಪ್ರಕಾಶ ಕಂದಕೂರ ಇತರರಿದ್ದರು.

ವಿಶ್ವ ಪರಿಸರ ದಿನಾಚರಣೆ

ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಗ್ರಾಪಂ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗುರುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸರವಗೊಳ ದೇವಸ್ಥಾನ ಆವರಣದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮದ ಪ್ರಮುಖರಾದ ಗೋಣಿಬಸಪ್ಪ ಗುಡ್ಲಾನೂರ, ಶರಣಪ್ಪ ಸಿಂದೋಗಿ, ಹಾಲಪ್ಪ ನಾಗರಳ್ಳಿ, ಉಮಾದೇವಿ ಎಸ್​. ಸಿಂದೋಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net