ಪರಿಸರ ಅಧಿಕಾರಿಗಳಿಗೆ ಮನವಿ

district koppal environment mspl protest
Published on

ಕೊಪ್ಪಳ: ಬಲ್ಡೋಟಾ ಕಂಪನಿಗೆ ನಿರಪೇಕ್ಷಣಾ ಪತ್ರ ನೀಡದಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ಪದಾಧಿಕಾರಿಗಳು ಶುಕ್ರವಾರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೊಪ್ಪಳ ತಾಲೂಕಿನಲ್ಲಿ ಈಗಾಗಲೇ ನೂರಾರು ಕಾರ್ಖಾನೆಗಳು ಸ್ಥಾಪನೆಯಾಗಿದ್ದು, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೈಗಾರಿಕೆ ನಿಯಮಗಳಿಗೆ ವಿರುದ್ಧವಾಗಿ ಹೊಸ ಕಾರ್ಖಾನೆ ನಿರ್ಮಾಣ ಆಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಪರಿಸರ ರಸಿ ಜನರ ಆರೋಗ್ಯ ಕಾಪಾಡುವುದು ನಿಮ್ಮ ಕರ್ತವ್ಯ. ಜನರ ಹಿತದೃಷ್ಟಿ ಕೈ ಬಿಟ್ಟು ಕಂಪನಿಗಳಿಗೆ ಮನಬಂದತೆ ಅನುಮತಿ ನೀಡಬಾರದು ಎಂದು ಎಚ್ಚರಿಸಿದರು.

ಒಂದೊಮ್ಮೆ ಈಗಾಗಲೇ ನೀಡಿದ್ದರೆ ರದ್ದುಪಡಿಸಬೇಕೆಂದು ಆಗ್ರಹಿಸಿದರು. ತಹಸೀಲ್ದಾರ್​ ಕಚೇರಿ ವೃತ್ತದಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಸೇನೆ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು, ಪದಾಧಿಕಾರಿಗಳಾದ ಜಿ.ಎಸ್​.ಗೋನಾಳ, ವಿನೋದ ಕುಮಾರ್​ ಜಿ, ಶಿವಕುಮಾರ ಏಣಗಿ, ಚಂದ್ರು ಅಣ್ಣಿಗೇರಿ, ಗವಿಸಿದ್ದಪ್ಪ ಮಂಗಳಾಪುರ, ಮಹ್ಮದ್​ ಗರ್ಸಗಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net