ಜೀವ ಅಸ್ತಿತ್ವಕ್ಕೆ ಕಾರಣ ಪರಿಸರ

environment day celebration in koppal tp forest department
ಕೊಪ್ಪಳ ತಾಲೂಕಿನ ಕಾಮನೂರು ಗ್ರಾಮದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಬುಧವಾರ ಸಸಿ ನೆಡಲಾಯಿತು.ಉಪ ಅರಣ್ಯ ಸಂರಕ್ಷಣಾಧಿಕಾರಿ ಹುಸೇನ ಪೆಂಡಾರಿ, ತಾಪಂ ನರೇಗಾ ಎಡಿ ಯಂಕಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರುನಗೌಡ ಪಾಟೀಲ್​, ಉಪ ವಲಯ ಅರಣ್ಯಧಿಕಾರಿ ಅಬ್ದು ಸಮಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಇದ್ದರು.
Published on

ಕೊಪ್ಪಳ: ಜೀವಿ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಪರಸರ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುಸೇನ ಪೆಂಡಾರಿ ಹೇಳಿದರು.

ತಾಲೂಕಿನ ಕಾಮನೂರು ಗ್ರಾಮದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನವ ತನ್ನ ಅಭಿವೃದ್ಧಿಗಾಗಿ ತನಗರಿವಿಲ್ಲದಂತೆಯೇ ಪರಿಸರ ಹಾಳು ಮಾಡುತ್ತಿದ್ದಾನೆ. ಇದನ್ನು ತಡೆಯಬೇಕಿದೆ. ಈ ಬಗ್ಗೆ ಕಾಳಜಿ ಮೂಡಿಸಲು ಪ್ರತಿ ವರ್ಷ ಜೂ.5ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಪರಿಸರ ರಕ್ಷಣೆ ಕೇಲವ ಕೆಲವರದ್ದಲ್ಲ. ಎಲ್ಲರ ಮೇಲಿದೆ. ದೈನಂದಿನ ಜೀವನದಲ್ಲೂ ಕೆಲ ಬದಲಾವಣೆ ಮಾಡಿಕೊಳ್ಳುವ ಮೂಲಕವೂ ಪರಿಸರ ಉಳಿಸಬಹುದು. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಹೆಚ್ಚಿಸೋಣ. ಭೂಮಿ ರಸೋಣ ಎಂದು ಕರೆ ನೀಡಿದರು.

ಗ್ರಾಮದ ಗೋಮಾಳದಲ್ಲಿ ಹೊಂಗೆ, ಅಪಸಿ, ಸಿಹಿ ಹುಣಸೆ, ಸಿಮಾರುಬಾ, ನೆರಳೆ ಸೇರಿ ಒಟ್ಟು 15 ಸಸಿ ನೆಡಲಾಯಿತು. ತಾಪಂ ನರೇಗಾ ಎಡಿ ಯಂಕಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರುನಗೌಡ ಪಾಟೀಲ್​, ಉಪ ವಲಯ ಅರಣ್ಯಧಿಕಾರಿ ಅಬ್ದು ಸಮಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಮೇಗಳಮನಿ, ಅರಣ್ಯ ಇಲಾಖೆ ತಾಂತ್ರಿಕ ಸಹಾಯಕಿ ನೇತ್ರಾವತಿ, ಅರಣ್ಯ ರಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net