

ಕೊಪ್ಪಳ: ಅರಣ್ಯ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಜಾಗತಿಕ ತಾಪಮಾನ ತಡೆಗಟ್ಟಬಹುದು ಎಂದು ಪರಿಸರವಾದಿ ರಮೇಶ ಬಳೂಟಗಿ ಅಭಿಪ್ರಾಯಪಟ್ಟರು.
ನಗರದ ಎಸ್ಎ್ಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಕುಟುಂಬಗಳು ಕೇವಲ ಸಾಂಪ್ರದಾಯಿಕ ಬೆಳೆ ಬೆಳೆಯದೇ ಅರಣ್ಯ ಕೃಷಿಗೂ ಆದ್ಯತೆ ನೀಡಬೇಕು. ನಮ್ಮ ಭಾಗ ಬಿಸಿಲ ನಾಡೆಂದು ಖ್ಯಾತಿಯಾಗಿವೆ. ಉತ್ತಮ ಗಿಡ&ಮರಗಳನ್ನು ಬೆಳೆಸಿ ಹೆಸರು ಬದಲಿಸಬಹುದು. ಬೆಲೆಬಾಳುವ ಶ್ರೀಗಂಧ, ರಕ್ತಚಂದನ, ಮಹಾಗನಿ, ರೋಸ್ ವುಡ್ ಮುಂತಾದ ಮರಗಳನ್ನು ಬೆಳೆಸಿ. ಇದರಿಂದ ಆರ್ಥಿಕ ಲಾಭದ ಜತೆಗೆ ಆರೋಗ್ಯವೂ ಸುಧಾರಿಸಲಿದೆ. ಜಾಗತಿಕ ತಾಪಮಾನದಿಂದ ಪರಿಸರ ಅಸಮತೋಲನವಾಗುತ್ತಿದೆ. ಅದನ್ನು ತಡೆಯಬೇಕು ಎಂದರು.
ಶಾಲಾ ವಿದ್ಯಾರ್ಥಿಗಳು ಪರಿಸರ ಜಾಗೃತಿ ಜಾಥಾ ಮೂಲಕ ಅರಿವು ಮೂಡಿಸಿದರು. ಹಾಡು, ನೃತ್ಯ, ನಾಟಕಗಳನ್ನು ಪ್ರದರ್ಶಿಸಿದರು. ಶಾಲಾ ಆವರಣದಲ್ಲಿ ಸಸಿ ನೆಟ್ಟರು. ಪ್ರಾಚಾರ್ಯರಾದ ಾ.ಜಬಮಲೈ, ಫಾ. ಜೋಜೋ, ವ್ಯವಸ್ಥಾಪಕ ಫಾ.ಮ್ಯಾಥ್ಯೂ ಇತರರಿದ್ದರು.
ಶಾಂತಿ ನಿಕೇತನ ಪಬ್ಲಿಕ್ ಶಾಲೆ
ನಗರದ ಕಿನ್ನಾಳ ರಸ್ತೆಯಲ್ಲಿನ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಪ್ರಜಾಪಿತ ಈಶ್ವರಿಯ ವಿವಿ ಅಕ್ಕ ಯೋಗಿನಿ ಮಾತನಾಡಿ, ಪರಿಸರ ನಮಗೆಲ್ಲ ನೀಡಿದೆ. ನಾವು ಪರಿಸರದಂತೆ ಇತರರಿಗೆ ಉಪಕಾರ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಮನುಷ್ಯ ಸ್ವಾರ್ಥಿ ಆಗದೆ, ಪಕೃತಿಯಿಂದ ಕಲಿಯುವುದು ಬಹಳ ಇದೆ. ಗಿಡ&ಮರ ನಾಶದಿಂದ ತಾಪಮಾನ ಹೆಚ್ಚುತ್ತಿದೆ. ಹೆಚ್ಚು ಗಿಡಗಳನ್ನು ಬೆಳೆಸಬೇಕು. ಇದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯ ಎಂದರು. ಶಾಲೆ ಅಧ್ಯಕ್ಷ ಎಂ.ಕೆ.ಹಿರೇಮಠ ಮಾತನಾಡಿದರು. ಪುಷ್ಪಲತಾ ಹಿರೇಮಠ, ಶ್ರೀದೇವಿ, ಸೂರಜ್ ಇತರರಿದ್ದರು.