

ಕೊಪ್ಪಳ: ಪರಿಸರ ರಕ್ಷಣೆಯಲ್ಲಿ ಸಾಮಾನ್ಯರ ಪಾತ್ರ ಮುಖ್ಯವಾಗಿದೆ. ಎಲ್ಲರೂ ಪರಿಸರ ಉಳಿಸುವ ಕೆಲಸ ಮಾಡಬೇಕು ಎಂದು ಡಿಎಚ್ಒ ಡಾ.ಟಿ.ಲಿಂಗರಾಜು ಹೇಳಿದರು.
ತಾಲೂಕಿನ ಗಿಣಿಗೇರಾದಲ್ಲಿ ಪರಿಸರ ದಿನ ಅಂಗವಾಗಿ ಗುರುವಾರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಸೂಚನೆಯಂತೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯಯುತ ವಾತಾವರಣ ನಿರ್ಮಿಸಬೇಕು. ಔಷಧ ಗುಣಗಳಿರುವ ಗಿಡ&ಮರಗಳನ್ನು ಆಸ್ಪತ್ರೆಯಲ್ಲಿ ಬೆಳೆಸಬೇಕು. ಇದರಿಂದ ಹಸಿರು ಪರಿಸರ ನಿರ್ಮಾಣವಾಗಲಿದೆ. ಶುದ್ಧ ಗಾಳಿ, ತಂಪಾದ ವಾತಾವರಣ ಇರಲಿದೆ. ಇದನ್ನು ಪರಿಣಾಕಾರಿಯಾಗಿ ಜಾರಿಗೊಳಿಸಿ ಎಂದು ಸೂಚಿಸಿದರು.
ರಾಷ್ಟ್ರೀಯ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮ ಜಿಲ್ಲಾ ನೋಡಲ್ ಅಧಿಕಾರಿಗ ಡಾ. ವೆಂಕಟೇಶ್ ಕೆ. ಮಾತನಾಡಿ, ಹವಾಮಾನ ಬದಲಾವಣೆಯಿಂದ ಪರಿಸರ ಅಸಮತೋಲನವಾಗುತ್ತಿದೆ. ನಮ್ಮ ಆರೋಗ್ಯ ಮೇಲಾಗುವ ದುಷ್ಪರಿಣಾಮ ತಡೆಯಲು ಪರಿಸರ ಉಳಿಸುವುದೊಂದೇ ಮಾರ್ಗ. ಇದನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಬೇಕು. ಪರಿಸರ ರಸಬೇಕು ಎಂದರು.
ಜಿಲ್ಲಾ ವಿ.ಬಿ.ಡಿ ಸಲಹೆಗಾರ ರಮೇಶ ಕೆ. ಮಾತನಾಡಿ, ವಿಶ್ವಸಂಸ್ಥೆ ವರದಿ ಅನುಸಾರ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿ ಶೇ.40ರಷ್ಟು ಣಿಸುತ್ತಿದೆ. ಪ್ರಪಂಚದ ಅರ್ಧದಷ್ಟು ಜನ ಸಂಖ್ಯೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಪರಿಸರ ರಕ್ಷಣೆ ಆಗದಿದ್ದಲ್ಲಿ 2050ರ ವೇಳೆಗೆ ವಿಶ್ವದ ಜನಸಂಖ್ಯೆ ಮುಕ್ಕಾಲು ಭಾಗದಷ್ಟು ಪರಿಣಾಮ ಬೀರಲಿದೆ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಪ್ರಕಾಶ ಎಚ್.ಎಸ್, ಡಾ.ಶಶಿಧರ, ಡಾ.ರಾಮಾಂಜನೇಯ ಇತರರಿದ್ದರು.