ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಡಾ.ರಾಮಕೃಷ್ಣ ಮುದ್ದೆಪಾಲ ಸಲಹೆ

environment day
ಕೊಪ್ಪಳ ತಾಲೂಕಿನ ಮುನಿರಾಬಾದ್​ ಐಆರ್​ಬಿ, ಕೆಎಸ್​ಆರ್​ಪಿ ತರಬೇತಿ ಶಾಲೆಯಲ್ಲಿ ಬುಧವಾರ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡಲಾಯಿತು. ಪ್ರಾಚಾರ್ಯ ಡಾ.ರಾಮಕೃಷ್ಣ ಮುದ್ದೆಪಾಲ, ಉಪ ಕಮಾಂಡೆಂಟ್​ಗಳಾದ ಜೆ.ರೂಪೇಶ, ರಾಧಾಕೃಷ್ಣ ಆರಾವತ್​, ಸಹಾಯಕ ಕಮಾಂಡೆಂಟ್​ ಮಂಜಪ್ಪ ಕೋಟಿಹಾಳ, ಇನ್ಸ್​ಪೆಕ್ಟರ್​ಗಳಾದ ಶರಣು ತೋಟದ, ಸಂಜಯ ಪವಾರ್​, ಪ್ರಕಾಶ ಇದ್ದರು.
Published on

ಕೊಪ್ಪಳ: ಪರಿಸರ ನಮಗೆಲ್ಲ ನೀಡಿದೆ. ಅದನ್ನು ರಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮುನಿರಾಬಾದ್​ ಐಆರ್​ಬಿ, ಕೆಎಸ್​ಆರ್​ಪಿ ತರಬೇತಿ ಶಾಲೆ ಪ್ರಾಚಾರ್ಯ ಡಾ.ರಾಮಕೃಷ್ಣ ಮುದ್ದೆಪಾಲ ಹೇಳಿದರು.

ತಾಲೂಕಿನ ಮುನಿರಾಬಾದ್​, ಕೆಎಸ್​ಆರ್​ಪಿ ತರಬೇತಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವದ 143 ದೇಶಗಳು ಪರಿಸರ ದಿನ ಆಚರಿಸುತ್ತಿವೆ. 1974ರಿಂದ ದಿನಾಚರಣೆ ಇದೆ. ಪರಿಸರ ರಕ್ಷಣೆ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಆಚರಿಸುತ್ತಿದ್ದೇವೆ. ಅತಿಯಾದ ಆಸೆಗಳಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಇಂಧನ, ವಾಹನ ಬಳಕೆ ಸೇರಿ ಇತರ ಕೃತ್ಯಗಳಿಂದ ಪರಿಸರ ಹಾಳಾಗುತ್ತಿದೆ. ಗಾಳಿ, ನೀರು, ಮಣ್ಣು, ಖನಿಜ ಸಂಪತ್ತು ಎಲ್ಲರ ಸ್ವತ್ತು. ವನ್ಯ ಪ್ರಾಣಿಗಳ ಜೀವನ ಸರಪಳಿಗೂ ಪೂರಕ. ಅದನ್ನು ರಸಬೇಕಿದೆ. ವಾಯು, ಶಬ್ದ, ಜಲ ಮಾಲಿನ್ಯ ಮಾಡುವುದನ್ನು ಕಡಿಮೆ ಮಾಡಬೇಕು. ಅದೆಲ್ಲವೂ ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಎಲ್ಲರೂ ಅರಿತಾಗಲೇ ಪರಿಸರ ದಿನಾಚರಣೆಗೆ ಅರ್ಥ ಬರಲಿದೆ ಎಂದರು.

ಉಪ ಕಮಾಂಡೆಂಟ್​ ಜೆ.ರೂಪೇಶ ಮಾತನಾಡಿ, ಉತ್ತರ ರಾಜ್ಯಗಳಲ್ಲಿ ಈ ಬಾರಿ ಬಿಸಿಲು ಹೆಚ್ಚಾಗಿದೆ. ಪರಿಸರದಲ್ಲಿನ ಏರಿಳೀತವೇ ಇದಕ್ಕೆ ಕಾರಣ. ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡಬೇಕು. ಗಿಡ-ಮರಗಳನ್ನು ಅಧಿಕವಾಗಿ ಬೆಳೆಸಬೇಕು. ಅರಣ್ಯ ಸಂಪತ್ತು ಉಳಿಸಬೇಕು. ಮುಂದಿನ ಪೀಳಿಗೆಗೂ ಪರಿಸರದ ಮೇಲೆ ಹಕ್ಕಿದೆ. ಅದನ್ನು ಅರಿತು ನಾವೆಲ್ಲ ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಉಪ ಕಮಾಂಡೆಂಟ್​ ರಾಧಾಕೃಷ್ಣ ಆರಾವತ್​, ಸಹಾಯಕ ಕಮಾಂಡೆಂಟ್​ ಮಂಜಪ್ಪ ಕೋಟಿಹಾಳ, ಇನ್ಸ್​ಪೆಕ್ಟರ್​ಗಳಾದ ಶರಣು ತೋಟದ, ಸಂಜಯ ಪವಾರ್​, ಪ್ರಕಾಶ, ಅರುಣಕುಮಾರ್​, ಆನಂದ, ಎರಡು ಟಕಗಳ ಅಧಿಕಾರಿ, ಸಿಬ್ಬಂದಿ ಇದ್ದರು.

25 ಸಾವಿರ ಗಿಡಗಳು
170 ಎಕರೆ ಪ್ರದೇಶದಲ್ಲಿ ಐಆರ್​ಬಿ ಇದ್ದು, ಪ್ರತಿ ವರ್ಷ ಗಿಡಗಳನ್ನು ನೆಡಲಾಗುತ್ತಿದೆ. ಈವರೆಗೆ 25 ಸಾವಿರ ಗಿಡಗಳನ್ನು ನೆಡಲಾಗಿದೆ. ಇದರಿಂದ ಉತ್ತಮ ಪರಿಸರ ನಿರ್ಮಾಣವಾಗಿದೆ. ನವಿಲು, ಗಿಣಿ, ಗೊರವಂಕ ಸೇರಿ ಅನೇಕ ಪಗಳು, ಕಾಡು ಬೆಕ್ಕು, ಹಂದಿ, ಮೊಲ ಇತರ ಪ್ರಾಣಿಗಳು ಓಡಾಡುತ್ತಿವೆ. ಸ್ವಚ್ಛ ಗಾಳಿ ಬೀಸುತ್ತಿದೆ. ಇದೆಲ್ಲವನ್ನು ಆನಂದಿಸುವುದೇ ನಿಜವಾದ ಸಂತೋಷ ಎಂದು ಅಧಿಕಾರಿಗಳು ಸಂಭ್ರಮಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net