ವಿದ್ಯುತ್​ ಗ್ರಾಹಕರ ಸಂವಾದ ಸಭೆ ಮಾ.15ಕ್ಕೆ

Published on

ಕೊಪ್ಪಳ: ಗುಲ್ಬರ್ಗಾ ವಿದ್ಯುತ್​ ಸರಬರಾಜು ಕಂಪನಿಯಿಂದ ಮುನಿರಾಬಾದ್​ ಕಚೇರಿ ವ್ಯಾಪ್ತಿಯ ವಿದ್ಯುತ್​ ಗ್ರಾಹಕರ ಕುಂದು ಕೊರತೆ ಪರಿಹರಿಸುವ ಹಿನ್ನೆಲೆಯಲ್ಲಿ ವಿದ್ಯುತ್​ ಗ್ರಾಹಕರ ಸಂವಾದ ಸಭೆ ಮಾ.15ರಂದು ಬೆಳಗ್ಗೆ 11 ಗಂಟೆಗೆ ಮುನಿರಾಬಾದ್​ ಜೆಸ್ಕಾಂ ಕಚೇರಿಯಲ್ಲಿ ಏರ್ಪಡಿಸಲಾಗಿದೆ.

ಪ್ರತಿ ತಿಂಗಳ 3ನೇ ಶನಿವಾರ ಸಭೆ ಹಮ್ಮಿಕೊಳ್ಳಲಾಗುವುದು. ಮುನಿರಾಬಾದ್​, ಹುಲಿಗಿ, ಹಿಟ್ನಾಳ, ಅಗಳಕೇರಾ, ಶಿವಪುರ, ಗಿಣಿಗೇರಾ, ಹಿರೇಬಗನಾಳ, ಕುಣಿಕೇರಾ, ಕಲ್​ತಾವರಗೇರಾ, ಬಂಡಿಹರ್ಲಾಪುರ, ಬೂದುಗುಂಪಾ, ಗುಳದಳ್ಳಿ, ಬೇವಿನಹಳ್ಳಿ, ಇಂದರಗಿ, ಹೊಸಳ್ಳಿ ಗ್ರಾಪಂ ಗ್ರಾಹಕರು ಸಭೆಗೆ ಹಾಜರಾಗಿ ಯಶಸ್ವಿಗೊಳಿಸುವಂತೆ ಜೆಸ್ಕಾಂ ಎಇಇ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net