ಕೊಪ್ಪಳದಲ್ಲಿ ವಿದ್ಯುತ್​ ಗುತ್ತಿಗೆದಾರರ ಪ್ರತಿಭಟನೆ

electrical contractors protest in Koppal to argue fullfill their demands
ಕೊಪ್ಪಳದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿದ್ಯುತ್​ ಗುತ್ತಿಗೆದಾರರು ಬುಧವಾರ ಪ್ರತಿಭಟನೆ ನಡೆಸಿದರು. ಸಂಘದ ಗೌರವ ಅಧ್ಯಕ್ಷ ಆಸೀಫ್​ ಇಕ್ಬಾಲ್​ ಡಾಲಾಯತ್​ , ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಮೌಲಾಸಾಬ ಬನ್ನಿಕೊಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಶೇಖರಗೌಡ ಪೊ.ಪಾ., ಕರಿಬಸಪ್ಪ ಗೋಟೂರು. ಗೌರವ ಕಾರ್ಯದರ್ಶಿ ಎಂ.ನಾರಾಯಣ, ಜಂಟಿ ಕಾರ್ಯದರ್ಶಿ ಪ್ರಕಾಶ ಇದ್ದರು.
Published on

ಕೊಪ್ಪಳ: ತುಂಡು ಗುತ್ತಿಗೆ ಸ್ಥಳಿಯರಿಗೆ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್​ ಗುತ್ತಿಗೆದಾರರ ಸಂದ ಜಿಲ್ಲಾ ಪದಾಧಿಕಾರಿಗಳು ಬುಧವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ತುಂಡು ಗುತ್ತಿಗೆಗಳನ್ನು ಸ್ಥಳಿಯರಿಗೆ ನೀಡುತ್ತಿಲ್ಲ. ಹೊಸ ದರಪಟ್ಟಿ ಜಾರಿಯಾಗಿದ್ದರೂ ಅಳವಡಿಸಿಕೊಂಡಿಲ್ಲ. ಗುತ್ತಿಗೆ ಅವಧಿ ಮುಗಿದವರಿಗೆ ಕೆಲವರಿಗೆ ಮುಂದುವರಿಸಲಾಗಿದೆ. ಬೇರೆಡೆ ಇರದ ನಿಯಮಗಳನ್ನು ಗಂಗಾವತಿ ವಿಭಾಗೀಯ ಕಚೇರಿಯಲ್ಲಿ ಅನುಸರಿಸುತ್ತಿರುವ ಕಾರಣ ಗ್ರಾಹಕರು, ಗುತ್ತಿಗೆದಾರರಿಗೆ ಅನಗತ್ಯ ವಿಳಂಬ ಆಗುತ್ತಿದೆ. ಹೊಸ ಲೇಔಟ್​ಗಳಲ್ಲಿ ಆರಂಭದಲ್ಲಿ ಗ್ರಾಹಕರಿಗೆ ಟಿಸಿ ಅಳವಡಿಸಿಕೊಳ್ಳಲು ಸೂಚಿಸುತ್ತಿಲ್ಲ. ವಿದ್ಯುತ್​ ಸ್ಥಾವರ ಬದಲಾವಣೆ, ಜಕಾತಿ ಬದಲಾವಣೆ ಅರ್ಜಿ ವಿಲೇವಾರಿಯಾಗುತ್ತಿಲ್ಲ ಎಂದು ಆರೋಪಿಸಿದರು.

ಐದು ಲಕ್ಷ ರೂ.ವರೆಗಿನ ತುಂಡು ಗುತ್ತಿಗೆ ಸ್ಥಳಿಯರಿಗೆ ನೀಡಬೇಕು. ಹೊಸ ದರ ಪಟ್ಟಿ ಜಾರಿಗೊಳಿಸಬೇಕು. ವಿವಿಧ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು. ಹನುಮಸಾಗರ ಉಪ ಶಾಖೆ ಪ್ರತ್ಯೇಕಿಸಬೇಕು. ಕೊಪ್ಪಳ, ಗಂಗಾವತಿ ಉಗ್ರಾಣದಲ್ಲಿ ಕಂಬಗಳನ್ನು ಲೋಡ್​ ಮಾಡಲು ಕ್ರೇನ್​ ವ್ಯವಸ್ಥೆ ಕಲ್ಪಿಸಬೇಕು. ಕುಷ್ಟಗಿ ಉಪ ವಿಭಾಗವನ್ನು ವಿಭಾಗೀಯ ಕಚೇರಿಯಾಗಿ ಮೇಲ್ದರ್ಜೆಗೇರಿಸಬೇಕು. ಐದು ವರ್ಷಕ್ಕಿಂತ ಹೆಚ್ಚು ಕಾಲ ಒಂದೆಡೆ ಕೆಲಸ ಮಾಡುತ್ತಿರುವ ಲೈನ್​ಮನ್​ಗಳನ್ನು ಬೇರೆಡೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

ಸಂಘದ ಗೌರವ ಅಧ್ಯಕ್ಷ ಆಸೀಫ್​ ಇಕ್ಬಾಲ್​ ಡಾಲಾಯತ್​ , ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಮೌಲಾಸಾಬ ಬನ್ನಿಕೊಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಶೇಖರಗೌಡ ಪೊ.ಪಾ., ಕರಿಬಸಪ್ಪ ಗೋಟೂರು. ಗೌರವ ಕಾರ್ಯದರ್ಶಿ ಎಂ.ನಾರಾಯಣ, ಜಂಟಿ ಕಾರ್ಯದರ್ಶಿ ಪ್ರಕಾಶ, ಸಂಘಟನಾ ಕಾರ್ಯದರ್ಶಿ ರಾಜಾಭಕ್ಷಿ, ಖಜಾಂಚಿ ಬಸವರಾಜ ಪಟ್ಟಣಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net