ಇಡಿ ದಾಳಿ ಬಿಜೆಪಿ ಹಳೇ ಚಾಳಿ, ಸಚಿವ ಮಧು ಬಂಗಾರಪ್ಪ ಟೀಕೆ

education minister Madhu Bangarappa school building inauguration kukanoor koppal
Published on

ಕೊಪ್ಪಳ: ಶಾಸಕರ ಮನೆ ಮೇಲೆ ಇಡಿ ದಾಳಿ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ದಾಳಿ ನಡೆಸುವುದು ಬಿಜೆಪಿಯವರ ಹಳೇ ಚಾಳಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಾಜಿ ಸಚಿವ ನಾಗೇಂದ್ರ, ಶಾಸಕ ದದ್ದಲ್​ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ತನಿಖಾ ಸಂಸ್ಥೆಗಳಿಂದ ಹೀಗೆ ದಾಳಿ ಮಾಡಿಸುವುದು ಬಿಜೆಪಿ ಕೆಲಸ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರದ ಬಗ್ಗೆ ಬೀದಿಯಲ್ಲಿ ಮಾತನಾಡಬಾರದು. ಈ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಗೊತ್ತಾಗಲಿದೆ ಎಂದು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆ ಇದೆ. ಈ ವರ್ಷದಲ್ಲಿ 12 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮತಿ ಕೋರಿ ಸಿಎಂಗೆ ಮನವಿ ಸಲ್ಲಿಸಿರುವೆ. ಸರ್ಕಾರಿ, ಶಾಲಾ&ಕಾಲೇಜುಗಳಲ್ಲಿ ಮಕ್ಕಳಿಗೆ ನೀಟ್​, ಸಿಇಟಿ ಪರೀೆ ತರಬೇತಿ ನೀಡಲಾಗುವುದು. ಪ್ರಸಕ್ತ ವರ್ಷ 25 ಸಾವಿರ ಮಕ್ಕಳಿಗೆ ತರಬೇತಿ ಆರಂಭವಾಗಲಿದೆ. 500 ಕೆಪಿಎಸ್​ ಶಾಲೆ ನೀಡಲಾಗುತ್ತಿದೆ. ಜತೆಗೆ ಶಾಲಾ ಪೂರ್ವ ತರಗತಿಗಳನ್ನು ಆರಂಭಿಸುತ್ತಿದ್ದೇವೆ. ಶಾಲೆಗಳಿಗೆ ಉಚಿತ ವಿದ್ಯುತ್​, ನೀರು ಪೂರೈಸಲಾಗುತ್ತಿದೆ. ಸದ್ಬಳಕೆ ಮಾಡಿಕೊಳ್ಳಿ. ರಾತ್ರಿ ವೇಳೆ ಅಗತ್ಯ ಇರುವ ಮಕ್ಕಳಿಗೆ ಪಾಠ ಮಾಡಿ ಎಂದು ಶಿಕ್ಷಕರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net