ಕೊಪ್ಪಳ: ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ೆ.23ರಂದು ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಿಮ್ಮೊಂದಿಗೆ ನಾವು ಕಾರ್ಯಕ್ರಮದಡಿ ಮಕ್ಕಳಿಗೆ ಚಿತ್ರಕಲಾ ಶಿಬಿರ ಮತ್ತು ಪ್ರಾತ್ಯಕೆ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಸದಸ್ಯ ವೆಂಕಟೇಶ ಬಡಿಗೇರ ತಿಳಿಸಿದರು.
ಅಕಾಡೆಮಿಯಿಂದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಹೈಕೋರ್ಟ್ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಕಾರ್ಯಕ್ರಮ ಉದ್ಘಾಟಿಸುವರು. ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿ ಇತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗುವರು. ಮಕ್ಕಳಲ್ಲಿ ಕಲೆಯ ಅರಿವು ಮೂಡಿಸುವಿಕೆ, ಹೊಸ ಆಯಾಮ, ಮಾಧ್ಯಮಗಳ ಪರಿಚಯ, ಕಲೆ ಬೆಳವಣಿಗೆ, ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ಶುಕ್ರವಾರ ಹೇಳಿದರು.
ಸುಮಾರು 300ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗುವರು. ಚಿತ್ರಕಲಾವಿದ ರಾಜು ತೇರದಾಳ ಪ್ರಾತ್ಯಕೆ ನೀಡುವರು. ಕರ್ನಾಟಕ ಕಲೆ ಮತ್ತು ಸಂಸತಿ ಕುರಿತು ಚಿತ್ರಕಲಾ ಶಿಕ್ಷಕ ತಿರುಪತಿ ಚಲವಾದಿ ವಿಮರ್ಶಾ ನುಡಿ ಆಡುವರು. ಅಕಾಡೆಮಿಯಿಂದ ಮೊದಲ ಬಾರಿಗೆ ಕೊಪ್ಪಳದಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮುಂದೆಯೂ ರಾಜ್ಯ, ರಾಷ್ಟ್ರಮಟ್ಟದ ಕಾರ್ಯಕ್ರಮ ಆಯೋಜನೆಗೆ ಯೋಜಿಸಲಾಗುವುದೆಂದು ವಿವರಿಸಿದರು.
ಅಕಾಡೆಮಿ ಸದಸ್ಯ ಚಂದ್ರಕಾಂತ ಸರೊದೆ, ಚಿತ್ರಕಲಾವಿದ ತಿರುಪತಿ ಚಲವಾದಿ, ಸಂಟಕ ಕೃಷ್ಣ ಬಡಿಗೇರ ಇದ್ದರು.