ಕುಡಿವ ನೀರು ಸಮಸ್ಯೆ ಪರಿಹಾರಕ್ಕೆ ಕ್ರಮ

district koppal drinking water zp help line
Published on

ಕೊಪ್ಪಳ: ಜಿಲ್ಲೆಯಲ್ಲಿನ ಕುಡಿವ ನೀರು ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ತಿಳಿಸಿದ್ದಾರೆ.

ಎಲ್ಲ ಏಳು ತಾಲೂಕುಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಜಿಲ್ಲಾ ಮಟ್ಟದಲ್ಲೂ ಸಹಾಯವಾಣಿ ಆರಂಭಿಸಿದ್ದು, ಸಮಸ್ಯೆಗಳಿದ್ದಲ್ಲಿ 08539-&221207 ಸಂಖ್ಯೆಗೆ ಕರೆ ಮಾಡಬಹುದು. ಜಿಲ್ಲೆಯ 153 ಗ್ರಾಪಂಗಳಲ್ಲಿ 2,278 ಸರ್ಕಾರಿ, 5,551 ಖಾಸಗಿ ಕೊಳವೆ ಬಾವಿಗಳಿವೆ. 776 ಬಾಡಿಗೆ ಪಡೆಯಲು ಗುರುತಿಸಲಾಗಿದೆ. 11 ಗ್ರಾಪಂಗಳ 14 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಕೊಪ್ಪಳ ತಾಲೂಕಿನಲ್ಲಿ 14, ಕುಷ್ಟಗಿ 1, ಕನಕಗಿರಿ ತಾಲೂಕಿನಲ್ಲಿ 2 ಕೊಳವೆ ಬಾವಿ ಬಾಡಿಗೆ ಪಡೆಯಲಾಗಿದೆ. ಕನಗಿರಿ ತಾಲೂಕಿನ ಚಿಕ್ಕಖೇಡ, ಕನಕಾಪುರ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಚಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ 111 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗಬಹುದೆಂದು ಅಂದಾಜಿಸಲಾಗಿದೆ.

ಕುಡಿವ ನೀರು ಮೂಲಗಳನ್ನು ನಿಯಮಾನುಸಾರ ಪರೀೆಗೆ ಒಳಪಡಿಸಲಾಗುತ್ತಿದೆ. ಅಗತ್ಯ ಪೈಪ್​ಲೈನ್​ ಕಾಮಗಾರಿ, ಬೋರ್​ವೆಲ್​ ಕೊರೆಸುವಿಕೆ, ಪ್ಲಶಿಂಗ್​ ಕಾಮಗಾರಿಗಳ ಕ್ರಿಯಾ ಯೋಜನೆ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net