ಕೊಪ್ಪಳ: ಕರ್ನಾಟಕ ರಾಜ್ಯ ನಾಟಕ ಬರಹಗಾರರ(ಕವಿಗಳ) ಕೊಪ್ಪಳ ಜಿಲ್ಲಾ ಪದಾಧಿಕಾರಿಗಳನ್ನು ನೇಮಿಸಿದ್ದು ಜು.13ರಂದು ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನೂತನ ಅಧ್ಯಕ್ಷ ಹಾಲಯ್ಯ ಹುಡೇಜಾಲಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಪ್ಪಳದ ಕುಷ್ಟಗಿ ರಸ್ತೆಯಲ್ಲಿ ಜಿಲ್ಲಾ ಕಚೇರಿ ಆರಂಭಿಸಲಾಗಿದೆ. ಸದ್ಯಕ್ಕೆ ನನ್ನನ್ನು ಮಾತ್ರ ರಾಜ್ಯಾಧ್ಯಕ್ಷರು ನೇಮಿಸಿದ್ದಾರೆ. ಜು.13ರಂದು ಪದಗ್ರಹಣವಿದ್ದು ಬಳಿಕ ಎಲ್ಲರ ಸಭೆ ಕರೆದು ಇತರ ಪದಾಧಿಕಾರಿಗಳನ್ನು ನೇಮಿಸಲಾಗುವುದು. ಬೆಳಗ್ಗೆ 11 ಗ ಮಟೆಗೆ ಕಾರ್ಯಕ್ರಮ ಇರಲಿದೆ. ಸಂದ ರಾಜ್ಯ ಅಧ್ಯಕ್ಷ ಶಂಕರ ಹಿಪ್ಪರಗಿ, ಕಾರ್ಯದರ್ಶಿ ರಮೇಶ ಬಡಿಗೇರ, ಗೌರವ ಅಧ್ಯಕ್ಷ ಡಿ.ಆರ್.ಪೂಜಾರ, ಸಾಹಿತಿಗಳಾದ ಈಶ್ವರ ಹತ್ತಿ, ಮಹಾಂತೇಶ ಮಲ್ಲನಗೌಡರ, ವಿಜಯಲಕ್ಷಿ$್ಮ ಕೊಟಗಿ, ಈಶಯ್ಯ ಹಿರೇಮಠ, ಬಸವರಾಜ ಬಿನ್ನಾಳ ಭಾಗಿಯಾಗುವರು.
ಜಿಲ್ಲೆಯಲ್ಲಿ ಅನೇಕ ಕವಿಗಳಿದ್ದು ಸಾಕಷ್ಟು ಪ್ರಸಿದ್ಧ ನಾಟಕ ಬರೆದಿದ್ದಾರೆ. ಆದರೆ, ಅವರಿಗೆ ಸಿಗಬೇಕಾದ ಗೌರವ, ಸಂಭಾವನೆ ದೊರೆಯುತ್ತಿಲ್ಲ. ನಾಟಕ ಪ್ರದರ್ಶನ ಮಾಡುವವರು ಅವರ ಹೆಸರು ಸಹ ಹೇಳುವುದಿಲ್ಲ. ಅದೆಲ್ಲವನ್ನು ಸರಿಪಡಿಸಿ ಕವಿಗಳಿಗೆ ಗೌರವ, ಸಂಭಾವನೆ ದೊರಕಿಸಿಕೊಡಲು ಸಂ ಶ್ರಮಿಸಲಿದೆ. ನಾಟಕ ಕೃತಿ ಪ್ರಕಟಣೆಗೂ ಯೋಜಿಸಲಾಗಿದೆ ಎಂದು ತಿಳಿಸಿದರು. ಕವಿಗಳಾದ ಹನುಮಂತಪ್ಪ ಮಾಸ್ತಾರ, ಬಸವರಾಜ ಹೆಸರೂರು, ಟಿ.ಎಚ್.ತಳಕಲ್, ಎಸ್.ಎಸ್.ಮುದ್ಲಾಪುರ ಇದ್ದರು.