ವೈದ್ಯ ವೃತ್ತಿ ಪವಿತ್ರವಾದದು

district koppal doctors day celebration
Published on

ಕೊಪ್ಪಳ: ವೈದ್ಯ ವೃತ್ತಿ ಪವಿತ್ರವಾದದ್ದು. ಸಮಸ್ಯೆ ಹೊತ್ತು ಬರುವ ರೋಗಿಗಳಿಗೆ ಧೈರ್ಯ ತುಂಬಿ ಚಿಕಿತ್ಸೆ ನೀಡಬೇಕು. ಸೌಜನ್ಯದಿಂದ ವರ್ತಿಬಸೇಕು ಎಂದು ಹಿರಿಯ ವೈದ್ಯ ಡಾ.ಕೆ.ಜಿ.ಕುಲಕರ್ಣಿ ಹೇಳಿದರು.

ನಗರದ ಕೆ.ಎಸ್​.ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವೀಯ ಗುಣ ಅಳವಡಿಸಿಕೊಳ್ಳಬೇಕು. ಸಮಯ ಪಾಲನೆ, ಕರ್ತವ್ಯ ಅವಧಿಯಲ್ಲಿ ಆಸ್ಪತ್ರೆಯಲ್ಲಿರಬೇಕು. ರೋಗಿಗಳೊಡನೆ ಉತ್ತಮ ಸಂವಹನ ನಡೆಸಬೇಕು. ಜತೆಗೆ ನಮ್ಮ ಕುಟುಂಬದ ಆರೋಗ್ಯದೆಡೆ ಗಮನ ನೀಡಬೇಕೆಂದು ಸಲಹೆ ನೀಡಿದರು.

ಡಾ.ಎಸ್​.ಬಿ.ದಾನರಡ್ಡಿ ಮಾತನಾಡಿ, ವೃತ್ತಿಗೌರವ ಕಾಪಾಡಬೇಕು. ರೋಗಿಗಳು ಮತ್ತವರ ಕಡೆಯವರಿಗೆ ಸ್ಪಂದಿಸಬೇಕು. ರೋಗ, ಚಿಕಿತ್ಸೆ ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಬೇಕು. ವಿಶ್ವಾಸ ಮೂಡಿಸುವಂತೆ ವರ್ತಿಸಿದಲ್ಲಿ ರೋಗಿ ಬೇಗ ಗುಣವಾಗುತ್ತಾನೆಂದು ಅನುಭವ ಹಂಚಿಕೊಂಡರು.

ಹೋಂ ಕೇರ್​ ಸರ್ವಿಸ್​ ಸೇವೆಗೆ ಚಾಲನೆ ನೀಡಲಾಯಿತು. ವೈದ್ಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು. ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜ ಕ್ಯಾವಟರ್​, ಡಾ.ಪ್ರವಿಣ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net