

ಕೊಪ್ಪಳ: ಭ್ರೂಣಲಿಂಗ ಪತ್ತೆ ಶಿಾರ್ಹ ಅಪರಾಧ. ಜಿಲ್ಲೆಯ ಯಾವುದೇ ಸ್ಕಾನಿಂಗ್ ಕೇಂದ್ರಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡಬಾರದು ಎಂದು ಡಿಎಚ್ಒ ಡಾ.ಟಿ.ಲಿಂಗರಾಜು ಹೇಳಿದರು.
ನಗರದ ಡಿಎಚ್ಒ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಭ್ರೂಣಲಿಂಗ ಪತ್ತೆ ಮಾಡುವ ವೈದ್ಯರಿಗೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10&50 ಸಾವಿರ ರೂ. ದಂಡ ವಿಧಿಸಬಹುದು. ಮೊದಲ ಅಫರಾದಕ್ಕೆ 5 ವರ್ಷಗಳವರೆಗೆ ಪರವಾನಗಿ ರದ್ದುಪಡಿಸಲಾಗುವುದು. ಎರಡನೇ ಬಾರಿ ಅಪರಾಧ ಪುನರಾವರ್ತನೆಯಾದಲ್ಲಿ ಪರವಾನಗಿ ರದ್ದುಪಡಿಸಲಾಗುವುದು. ಸಾರ್ವಜನಿಕರು ಕೃತ್ಯದಲ್ಲಿ ಭಾಗಿಯಾದರೆ 50 ಸಾವಿರದಿಂದ 1 ಲಕ್ಷ ರೂ.ವರೆಗೆ ದಂಡ ಮೊದಲ ಬಾರಿ ತಪು$್ಪ ಮಾಡಿದಲ್ಲಿ 3 ವರ್ಷ ಜೈಲು ಶಿೆ, ಎರಡನೇ ಬಾರಿ ತಪು$್ಪ ಮಾಡಿದಲ್ಲಿ 5 ವರ್ಷ ಜೈಲು ಶಿೆ ವಿದಿಸಲಾಗುವುದು ಎಂದರು.
ಕೊಪ್ಪಳದಲ್ಲಿ 54 ಸ್ಕಾ$ನಿಂಗ್ ಕೇಂದ್ರಗಳಿದ್ದು, ಪ್ರತಿ 3 ತಿಂಗಳಿಗೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಗುಪ್ತ ಕಾರ್ಯಾಚರಣೆ ಮೂಲಕವೂ ಪರಿಶೀಲನೆ ನಡೆಸಲಾಗುವುದು. 2024-&25ನೇ ಸಾಲಿನಲ್ಲಿ 54 ಸ್ಕಾ$ನಿಂಗ್ ಸೆಂಟರ್ಗಳಿಗೆ ಭೇಟಿ ನೀಡಲಾಗಿದೆ. 2025-&26 ನೇ ಮೊದಲ ತೆಮಾಸಿಕದಲ್ಲಿ ಈವರೆಗೆ 13 ಕೇಂದ್ರಗಳಿಗೆ ಭೇಟಿ ನೀಡಲಾಗಿದೆ. ಗುಪ್ತ ಕಾರ್ಯಾಚರಣೆ ಹೆಚ್ಚಿಸುವಂತೆ ತಂಡಕ್ಕೆ ಸಲಹೆ ನೀಡಿದರು.
ಸಲಹಾ ಸಮಿತಿ ಅಧ್ಯಕ್ಷ ಡಾ.ಕೆ.ಎಚ್. ತೊಗರಿ, ಸದಸ್ಯರಾದ ಡಾ.ರವೀಂದ್ರನಾಥ ಎಂ.ಎಚ್., ಡಾ.ಗಿರೀಶ್, ಜಿಲ್ಲಾ ವಾರ್ತಾಧಿಕಾರಿ ಡಾ. ಸುರೇಶ ಜಿ. ಇತರರಿದ್ದರು.