ಅಲ್ಬೆಂಡಾಜೋಲ್​ ಮಾತ್ರೆ ತಪ್ಪದೇ ಸೇವಿಸಿ

Published on

ಕೊಪ್ಪಳ: ಮಕ್ಕಳು ಕಡ್ಡಾಯವಾಗಿ ಅಲ್ಬೆಂಡಾಜೋಲ್​ ಮಾತ್ರೆ ಸೇವಿಸಬೇಕೆಂದು ಡಿಎಚ್​ಒ ಡಾ.ಟಿ.ಲಿಂಗರಾಜು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ನಗರದ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

1 ರಿಂದ 19 ವರ್ಷದ ಎಲ್ಲ ಮಕ್ಕಳಿಗೆ ಉಚಿತವಾಗಿ ಮಾತ್ರೆ ನೀಡಲಾಗುತ್ತಿದೆ. ಜಂತು ನಿವಾಕರಣ ಮಾತ್ರೆ ಸೇವನೆಯಿಂದ ರಕ್ತ ಹೀನತೆ ನಿಯಂತ್ರಿಸುತ್ತದೆ. ಪೌಷ್ಠಿಂಕಾಶ ಹೀರುವಿಕೆ ಸುಧಾರಣೆ ಆಗಲಿದೆ. ಏಕ್ರಾಗತೆ, ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತದೆ. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಸುಧಾರಿಸಲು ನೆರವಾಗುತ್ತದೆ. ಪರಿಸರದಲ್ಲಿ ಜಂತುಹುಳುಗಳನ್ನು ಕಡಿಮೆ ಮಾಡುವುದರ ಮೂಲಕ ಸಮುದಾಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ. ಆರು ತಿಂಗಳಿಗೊಮ್ಮೆ ಮಾತ್ರೆ ನೀಡಲಾಗುತ್ತದೆ. ಪಾಲಕರು ಕಡ್ಡಾಯವಾಗಿ ಮಾತ್ರೆ ನುಂಗಿಸಿ. ಡಿ.9ರಂದು ಮಾತ್ರೆ ನೀಡಲಾಗಿದೆ. ತಪ್ಪಿ ಹೋದ ಮಕ್ಕಳಿಗೆ ಡಿ.16ರಂದು ಮಾತ್ರೆ ನೀಡಲಾಗುವುದೆಂದರು.

ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ., ಡಿಡಿಪಿಐ ಶ್ರೀಶೈಲ ಬಿರಾದಾರ ಮಾತನಾಡಿದರು. ಪ್ರಾಚಾರ್ಯ ಮಂಜುನಾಥ ಬೇಳೂರು, ಡಾ.ವೆಂಕಟೇಶ, ಡಾ.ರಾಮಾಂಜನೇಯ, ಡಾ.ವಿನಾಯಕ, ಡಾ.ಮಹೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net