ಕೊಪ್ಪಳ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2025-&26ನೇ ಸಾಲಿನ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ, ವೈಯಕ್ತಿಕ ಸಾಲ, ಗಂಗಾ ಕಲ್ಯಾಣ, ಅರಿವು ಶೈಕ್ಷಣಿಕ ಸಾಲ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ, ಸ್ವಾವಲಂಬಿ ಸಾರಥಿ ಇತರ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಸೇವಾಸಿಂಧು ಪೋರ್ಟಲ್ www.sevasindhu.karnataka.gov.in ನಲ್ಲಿ ಜೂ.30 ರೊಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ವೆಬ್ಸೈಟ್ www.dbcdc.karnataka.gov.in, ದೂ.ಸಂ:080-22374832 ಮತ್ತು ಮೊಬೈಲ್: 8050770004, 8050770005 ಗೆ ಅಥವಾ ಕೊಪ್ಪಳ ಕಚೇರಿ ದೂ.ಸಂ: 08539-221847 ಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.