ಪ್ರತಿಭಾ ಪುರಸ್ಕಾರ ಜು.20ಕ್ಕೆ

devanga community feliciation program koppal
ಶಿವಶಂಕರ ಕರ್ಡಕಲ್​
Published on

ಕೊಪ್ಪಳ: ದೇವಾಂಗ ಸಮುದಾಯದ ಪ್ರತಿಭಾವಂಗತ ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ ಜು.20ರಂದು ಭಾಗ್ಯನಗರದ ಬನಶಂಕರಿ ದೇವಿ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಶಂಕರ ಕರ್ಡಕಲ್​ ಹೇಳಿದರು.

ಜಿಲ್ಲಾ ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ದೇವಾಂಗ ಕ್ಷೇಮಾಭಿವೃದ್ಧಿ ಸಂಘ, ಭಾಗ್ಯನಗರ, ಕಿನ್ನಾಳ ದೇವಾಂಗ ಸಮದಾಯ ಮತ್ತು ಕನಕಗಿರಿ ದಿ.ಡಾ.ಎಸ್​.ಜಿ.ಬಿಜ್ಜಳ ಸ್ಮಾರಕ ಪ್ರತಿಷ್ಠಾನ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಜು.20ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಇರಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

10 ಎಸ್ಸೆಸ್ಸೆಲ್ಸಿ, 15 ಪಿಯುಸಿ, 3 ಪದವಿ ವಿದ್ಯಾರ್ಥಿಗಳು, ನಿವೃತ್ತ ನೌಕರರು, ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಗುವುದು. ಹಂಪಿ ಹೇಮಕೂಟದ ದೇವಾಂಗ ಪೀಠದ ದಯಾನಂದಪುರಿ ಸ್ವಾಮೀಜಿ, ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ, ಮಾಜಿ ಶಾಸಕ, ರಾಜ್ಯ ನೇಕಾರ ಒಕ್ಕೂಟದ ಗೌರವಾಧ್ಯಕ್ಷ ಎಂ.ಡಿ.ಲಕ್ಷಿ$್ಮನಾರಾಯಣ, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಭಾಗಿಯಾಗುವರು ಎಂದರು.

ಸಮುದಾಯದ ಪ್ರಮುಖರಾದ ಶಿವಶಂಕರ ಚೆನ್ನಿ, ಪ್ರಹಲ್ಲಾದಗೌಡ ಮೆದಕೇರಿ, ವೀರೇಶ ಅರಳಿಕಟ್ಟಿ, ಚಂದ್ರಕಾಂತ ಬೆಟಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net