

ಕೊಪ್ಪಳ: ನೇಕಾರ ಸಮುದಾಯ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ನೀಡಬೇಕು ಎಂದು ಮಾಜಿ ಶಾಸಕ, ರಾಜ್ಯ ನೇಕಾರರ ಸಂದ ಗೌರವ ಅದ್ಯಕ್ಷ ಎಂ.ಡಿ.ಲಕ್ಷಿ$್ಮನಾರಾಯಣ ಹೇಳಿದರು.
ತಾಲೂಕಿನ ಭಾಗ್ಯನಗರದಲ್ಲಿ ಜಿಲ್ಲಾ ದೇವಾಂಗ ಸಮುದಾಯದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇಕಾರ ಅಭಿವೃದ್ಧಿ ನಿಗಮ ಆರಂಭಕ್ಕೆ ಯತ್ನಿಸಿದರೂ ಕೈಗೂಡಲಿಲ್ಲ. ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆಯಿದೆ. ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ನಿಗಮ ಸ್ಥಾಪಿಸಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ. ಸ್ಪರ್ಧಾತ್ಮಕ ಪರೀೆ ಬರೆದು ಉನ್ನತ ಹುದ್ದೆ ಪಡೆಯಲಿ. ಕಷ್ಟವಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಅವರು ಉನ್ನತ ಸ್ಥಾನಕ್ಕೆ ಏರಿದಲ್ಲಿ ಸಮುದಾಯ ಅಭಿವೃದ್ಧಿ ಆಗಲಿದೆ ಎಂದರು.
ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂದ ಜಿಲ್ಲಾದ್ಯಕ್ಷ ಶಿವಶಂಕರಪ್ಪ ಕರ್ಡಕಲ್ ಮಾತನಾಡಿ, ಸಂ ಕಟ್ಟುವುದು ಸುಲಭ ಕೆಲಸವಲ್ಲ. ಹಿರಿಯರ ಸಲಹೆಯಂತೆ ಸಮುದಾಯದ ಪ್ರತಿಯೊಬ್ಬರನ್ನು ಸಂಪರ್ಕಿಸಿ ಒಗ್ಗೂಡಿಸಿದ್ದೇವೆ. ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುಂದುವರಿದಲ್ಲಿ ಸಮುದಾಯ ಅಭಿವೃದ್ಧಿ ಆಗಲಿದೆ. ಪ್ರತಿಭಾ ಪುರಸ್ಕಾರ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಬಡ, ಮಧ್ಯಮ ವರ್ಗದವರು ಹೆಚ್ಚಾಗಿದ್ದೇವೆ. ಆದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸೋಣ ಎಂದು ಸಲಹೆ ನೀಡಿದರು.
ತಾಲೂಕು ಅಧ್ಯಕ್ಷ ವೀರೇಶ ಅರಳಿಕಟ್ಟಿ ಮಾತನಾಡಿದರು. ದೇವಾಂಗ ಮಹರ್ಷಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಹಂಪಿ ಹೇಮಕೂಟ ದೇವಾಂಗ ಪೀಠದ ಶ್ರೀ ದಯಾನಂದಪುರಿ ಮಹಾಸ್ವಾಮಿ, ಭಾಗ್ಯನಗರ ದೇವಾಂಗ ಮಠದ ಶ್ರೀ ವಿದ್ಯಾಧರ ಸ್ವಾಮೀಜಿ, ಕಿನ್ನಾಳ ದೇವಾಂಗ ಮಠದ ಶ್ರೀ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ, ಜಿಲ್ಲಾಧ್ಯಕ್ಷ ಶಿವಶಂಕರಪ್ಪ ಚೆನ್ನಿ, ಸಂಘಟನಾ ಕಾರ್ಯದರ್ಶಿ ಪರಗಿ ನಾಗರಾಜ ಇತರರಿದ್ದರು.