ಮಹಿಳೆಯರು ಕಾನೂನು ನೆರವು ಪಡೆಯಿರಿ

2108-Kpl-Ravi-2
Published on

ಕೊಪ್ಪಳ: ಮಹಿಳೆಯರು ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಉಚಿತ ಕಾನೂನು ನೆರವು ಪಡೆಯುವಂತೆ ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾಂತೇಶ ಎಸ್​. ದರಗದ್​ ಹೇಳಿದರು.

ನಗರದ ಕೃಷಿ ವಿಸ್ತರಣಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಮುಕ್ತ ದೇವದಾಸಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾಯಂ ಜನತಾ ನ್ಯಾಯಾಲಯ ಮೂಲಕ ಜನರು ವ್ಯಾಜ್ಯ ಬೇಗ ಇತ್ಯರ್ಥಪಡಿಸಿಕೊಳ್ಳಬಹುದು. ವಿವಿಧ ಇಲಾಖೆಗಳಿಂದಲೂ ತೊಂದರೆಯಾಗಿದ್ದಲ್ಲಿ ಜನತಾ ನ್ಯಾಯಾಲಯ ಮೂಲಕ ಪರಿಹಾರ ಪಡೆದುಕೊಳ್ಳಬಹುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಮಾತನಾಡಿ, ವಿಮುಕ್ತ ದೇವದಾಸಿಯರಿಗಾಗಿ ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಅವುಗಳನ್ನು ಅರ್ಹರು ಪಡೆಯುವಂತೆ ಸಲಹೆ ನೀಡಿದರು.

ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ ಮಾತನಾಡಿ, ಮಹಿಳೆಯರು ತಂಬಾಕು, ಗುಟ್ಖಾ ಚಟದಿಂದ ದೂರವಿರುವಂತೆ ತಿಳಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರ ರೋಹಿಣಿ ಕೊಟಗಾರ, ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.

ದೇವದಾಸಿ ಪುನರ್ವಸತಿ ಯೋಜನೆ ಯೋಜನಾಧಿಕಾರಿ ಪೂರ್ಣಿಮಾ, ದೇವದಾಸಿಯರ ಮರು ಸಮೀಕ್ಷೆ ಕೈಗೊಳ್ಳಲು ಒತ್ತಾಯಿಸಿದರು. ತಂಬಾಕು ವ್ಯಸನ ಕೇಂದ್ರದ ಶಾಂತಾ ಕಟ್ಟಿಮನಿ ಮಾತನಾಡಿದರು.

ಕಾರ್ಯಕ್ರಮದಲ್ಲಿ 90 ಮಾಜಿ ದೇವದಾಸಿ ಮಹಿಳೆಯರಿಗೆ ಆರೋಗ್ಯ ತರಪಾಸಣೆ ನಡೆಸಲಾಯಿತು. ಕಿಮ್ಸ್​ ವೈಧ್ಯಾಧಿಕಾರಿಗಳಾದ ಡಾ.ಚನ್ನಕೇಶವ, ಡಾ.ಮುಖೇಶ, ಡಾ.ಅಮರೇಶ, ಡಾ.ಸುಷ್ಮಾ, ಸಖಿ ಕೇಂದ್ರದ ಯಮುನಾ, ಪಿಐಒ ರೇಣುಕಾ, ಸಕ್ಕೂಬಾಯಿ, ಕೃಷ್ಣವೇಣಿ, ದಾದೇಸಾಬ ಹಿರೇಮನಿ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net