ಡೆಂಘೆ ಜ್ವರ ಪತ್ತೆ ದರ ಪರೀಕ್ಷರಣೆ

denge fever koppal DHO Lingaraju rate fixation
Published on

ಕೊಪ್ಪಳ: ಜಿಲ್ಲೆಯಲ್ಲಿ ಡೆಂಘೆ ಜ್ವರ ಪತ್ತೆ ಹಚ್ಚುವ ಪರಿಕ್ಷೆಗಳಾದ ಇ.ಎಲ್​.ಐ.ಎಸ್​.ಎ ಹಾಗೂ ರ್ಯಾಪಿಡ್​ ಟೆಸ್ಟ್​ಗಳ ದರ ಮರು ನಿಗದಿಪಡಿಸಲಾಗಿದೆ ಎಂದು ಡಿಎಚ್​ಒ ಡಾ ಟಿ.ಲಿಂಗರಾಜು ತಿಳಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ದರ ಮರು ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಟೆಸ್ಟಿಂಗ್​ ಲ್ಯಾಬ್​ಗಳಿಗೆ ಜ್ವರ ಪತ್ತೆ ಹಚ್ಚುವ ಇ.ಎಲ್​.ಐ.ಎಸ್​.ಎ ಎನ್​ಎಸ್​1 ಪರೀಕ್ಷೆಗೆ 300ರೂ., ಇ.ಎಲ್​.ಐ.ಎಸ್​.ಎ ಐಜಿಎಂ ಪರೀಕ್ಷೆಗೆ 300ರೂ., ಸ್ಕ್ರೀನಿಂಗ್​ ಟೆಸ್ಟ್​: ರ್ಯಾಪಿಡ್​ ಕಾರ್ಡ್​ ಟೆಸ್ಟ್​ ಫಾರ್​ ಎನ್​ಎಸ್​1 ಐಜಿಎಂ & ಐಜಿಜಿ ಪರೀಕ್ಷೆಗಳಿಗೆ 250ರೂ. ದರ ನಿಗದಿಪಡಿಸಲಾಗಿದೆ. ಖಾಸಗಿ ಆಸ್ಪತ್ರೆ, ಪ್ರಯೋಗಾಲಯ, ಡಯಾಗ್ನೋಸ್ಟಿಕ್​ ಲ್ಯಾಬ್​ಗಳು ಡೆಂಘೆ ಜ್ವರ ಪತ್ತೆ ಹಚ್ಚುವ ಪರೀಕ್ಷೆ ಪರಿಷತ ದರಗಳ ಆದೇಶ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net