ಅತಿಥಿ ಶಿಕ್ಷಕರಿಗೂ ಬೋಧನಾ ತರಬೇತಿ

district koppal ddpi koppal sslc results guest teacher
Published on

ಕೊಪ್ಪಳ: ಕಳೆದ ವರ್ಷ ಎಸ್ಸೆಸ್ಸೆಲ್ಸಿ ಲಿತಾಂಶ ತೀವ್ರ ಕುಸಿತ ಕಂಡಿದೆ. ಸುಧಾರಣಾ ಕ್ರಮವಾಗಿ ಇಲಾಖೆ ಅತಿಥಿ ಶಿಕ್ಷಕರಿಗೂ ಡಯೇಟ್​ ಮೂಲಕ ತರಬೇತಿ ನೀಡಲು ಮುಂದಾಗಿದೆ. ಇಂದಿನಿಂದ ಶಾಲೆ ಮರು ಆರಂಭವಾಗಲಿದ್ದು ತರಬೇತಿಯೂ ಶ್ರೀ ಆರಂಭವಾಗಲಿದೆ.

ಶಾಲೆ ಆರಂಭದಲ್ಲೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 184 ಸರ್ಕಾರಿ ಪ್ರೌಢ ಶಾಲೆ ಹಾಗೂ 959 ಪ್ರಾಥಮಿಕ ಶಾಲೆಗಳಿವೆ. ಪ್ರೌಢ ಶಾಲೆಯಲ್ಲಿ 626, ಪ್ರಾಥಮಿಕ ಶಾಲೆಯ 1,874 ವಿಷಯ ಶಿಕ್ಷಕರ ಹುದ್ದೆ ಖಾಲಿ ಇದ್ದು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಶಾಲೆಗೆ ಹಾಜರಾಗುವ ಜತೆಗೆ ಮುನಿರಾಬಾದ್​ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ತರಬೇತಿಗೂ ಅತಿಥಿ ಶಿಕ್ಷಕರು ಹಾಜರಿ ಹಾಕಬೇಕಿದೆ.

ಕಳೆದ ವರ್ಷ ಶೇ.57ರಷ್ಟು ಲಿತಾಂಶ ಪಡೆದ ಜಿಲ್ಲೆ ರಾಜ್ಯಮಟ್ಟದಲ್ಲಿ 30ನೇ ಸ್ಥಾನ ಪಡೆದಿದೆ. ಸರ್ಕಾರಿ ಶಾಲೆಗಳ ಲಿತಾಂಶ ತೀರಾ ಕುಸಿತ ಕಂಡಿದೆ. ರಾಜ್ಯಮಟ್ಟದ ಸರಾಸರಿ ಲಿತಾಂಶ ಪಡೆಯುವಲ್ಲಿಯೂ ವಿಲವಾಗಿವೆ. ಅತಿಥಿ ಶಿಕ್ಷಕರಿಗೆ ತರಬೇತಿ ಜತೆಗೆ ಕೆಲಸದಿಂದ ತೆಗೆವ ಸೂಚನೆ ನೀಡಿದೆ. ಅತಿಥಿ ಶಿಕ್ಷಕರು ಇರುವ ಶಾಲೆಗಳಲ್ಲಿ ಆಯಾ ವಿಷಯ ಲಿತಾಂಶ ಆಧರಿಸಿ ಈ ಕ್ರಮ ಜಾರಿಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಹೀಗಾಗಿ ಶಾಲೆ ಆರಂಭದಲ್ಲಿ ಪಾಠ ಮಾಡುವ ಅವಕಾಶ ಶಿಕ್ಷಕರಿಗೆ ದೊರೆತರೂ ತಮ್ಮ ಕೆಲಸ ಉಳಿಯುವುದಾ, ಇಲ್ಲವೆಂಬ ಭೀತಿ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net