ಚುನಾವಣಾಧಿಕಾರಿಗಳ ತರಬೇತಿ ವೀಸಿದ ಡಿಸಿ ನಲಿನ್​ ಅತುಲ್​

dc visit pro apro training session in koppal district
ಯಲಬುರ್ಗಾದಲ್ಲಿ ಸೋಮವಾರ ಡಿಸಿ ನಲಿನ್​ ಅತುಲ್​ ಮತಯಂತ್ರ ಭದ್ರತಾ ಕೊಠಡಿ ವೀಸಿದರು. ಸಹಾಯಕ ಚುನಾವಣಾಧಿಕಾರಿಗಳಿದ್ದರು.
Published on

ಕೊಪ್ಪಳ: ಚುನಾವಣಾ ಕರ್ತವ್ಯ ಅಚ್ಚುಕಟ್ಟಾಗಿ ನಿಭಾಯಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಪಿಆರ್​ಒ, ಎಪಿಆರ್​ಒಗಳಿಗೆ ಸೂಚಿಸಿದರು.

ಲೋಕಸಭೆ ಚುನಾವಣೆ ಅಂಗವಾಗಿ ಗಂಗಾವತಿ, ಯಲಬುರ್ಗಾ, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಪಿಆರ್​ಒಗಳು ಹಾಗೂ ಎಪಿಆರ್​ಒಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಮೇ 7ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಪಿಆರ್​ಒಗಳು, ಎಪಿಆರ್​ಒಗಳ ಪಾತ್ರ ಬಹುಮುಖ್ಯ. ಪ್ರತಿ ಹಂತದಲ್ಲಿ ಚುನಾವಣಾ ಆಯೋಗ ನೀಡಿದ ಮಾರ್ಗಸೂಚಿ ಪಾಲಿಸಿ. ನಿರ್ದೇಶನಗಳನ್ನು ಸರಿಯಾಗಿ ಓದಿಕೊಳ್ಳಿ. ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ. ಮಸ್ಟರಿಂಗ್​, ಡಿಮಸ್ಟರಿಂಗ್​, ಚುನಾವಣಾ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆಯಿರಿ. ಯಾವುದೇ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಗಂಗಾವತಿ ಲಯನ್ಸ್​ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆ ಆವರಣದಲ್ಲಿ ನಡೆದ ಪಿ.ಎ.ಆರ್​.ಓ., ಎ.ಪಿ.ಆರ್​.ಓ.ಗಳ ಮಸ್ಟರಿಂಗ್​, ಡಿಮಸ್ಟರಿಂಗ್​ ಮತ್ತು ಚುನಾವಣಾ ತರಬೇತಿ ಕಾರ್ಯಕ್ರಮ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮತಯಂತ್ರಗಳ ಭದ್ರತಾ ಕೊಠಡಿ ವೀಸಿದರು. ಗವಿಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಚುನಾವಣಾ ಸಿಬ್ಬಂದಿ ಊಟದ ವ್ಯವಸ್ಥೆ ಸಿದ್ಧತೆ ಗಮನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net