ಸೌರ ಕೃಷಿಯಿಂದ ಆದಾಯ ವೃದ್ಧಿ, ಡಿಸಿ ಡಾ.ಸುರೇಶ ಬಿ.ಇಟ್ನಾಳ ಅನಿಸಿಕೆ

district koppal dc suresh itnala solara agreeculture
Published on

ಕೊಪ್ಪಳ: ಪರಿಸರ ಸ್ನೇಹಿ ಸೌರ ಕೃಷಿ, ಸೌರ ಉದ್ಯೋಗದಿಂದ ಜನರ ಆದಾಯತ ವೃದ್ಧಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.

ತಾಲೂಕಿನ ಭಾಗ್ಯನಗರದಲ್ಲಿ ಜಿಲ್ಲಾಡಳಿತ, ಜಿಪಂನಿಂದ ಹಮ್ಮಿಕೊಂಡಿದ್ದ ಕೊಪ್ಪಳ ಸೌರಕೃಷಿ ಉದ್ಯೋಗ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಕೊಪ್ಪಳದಲ್ಲಿ ಬಹುಪಾಲು ಜನರು ಕೃಷಿ ಅವಲಂಬಿಸಿದ್ದಾರೆ. ಶೇ.25ರಷ್ಟು ನೀರಾವರಿ ಇದ್ದರೆ, ಉಳಿದ ಭಾಗ ಒಣ ಬೇಸಾಯ ಅವಲಂಬಿಸಿದೆ. ಬೆಳೆಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಕೃಷಿ ಉತ್ಪನ್ನಗಳ ಮೌಲ್ಯವರ್ದನೆ ಮಾಡಿದಲ್ಲಿ ಲಾಭ ಹೆಚ್ಚಲಿದೆ. ಸೌರ ಶಕ್ತಿಯಿಂದ ಬಳಕೆಯಾಗುವ ಕೃಷಿ ಉಪಕರಣ ಬಳಕೆ ಹೆಚ್ಚಬೇಕು. ಸ್ವಸಹಾಯ ಸಂಗಳು ಮೇಣದ ಬತ್ತಿ ಉತ್ಪಾದನೆ, ರೊಟ್ಟಿ ತಯಾರಿಕೆ, ಶ್ಯಾವಿಗೆ, ಚಕ್ಕುಲಿ, ಆಲುಗಡ್ಡೆ ಚಿಪ್ಸ್​ ಹಾಗೂ ಇತರೆ ಆಹಾರ ಪದಾರ್ಥಗಳನ್ನು ತಯಾರಿಸುವ ಸೌರ ಶಕ್ತಿಯ ಯಂತ್ರೋಪಕರಣಗಳನ್ನು ಬಳಕೆ ಮಾಡಬೇಕೆಂದು ಸಲಹೆ ನೀಡಿದರು.

ಸೆಲ್ಕೋ ೌಂಡೇಶನ್​ ಸಿಇಒ ಹರೀಶ್​ ಹಂದೆ ಮಾತನಾಡಿ, ಸೌರ ಶಕ್ತಿ ಬಳಕೆಯಲ್ಲಿ ವಿವಿಧ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕೃಷಿ ಮತ್ತು ಉದ್ಯೋಗದಲ್ಲಿ ಸೌರ ಶಕ್ತಿ ಬಳಕೆ ಅತ್ಯವಶ್ಯ. ಕೊಪ್ಪಳದಲ್ಲಿ ಒಂದು ವರ್ಷದಲ್ಲಿ ಒಂದು ಸಾವಿರ ಸೌರ ಶಕ್ತಿ ಚಾಲಿತ ಸಿರಿಧಾನ್ಯ ಸಂಸ್ಕರಣ ಘಟಕಗಳ ಸ್ಥಾಪನೆ ಗುರಿ ಹಾಕಿಕೊಳ್ಳಲಾಗಿದೆ. ಜಿಲ್ಲೆ ದೇಶಕ್ಕೆ ಮಾದರಿಯಾಗಲಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​. ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸೌರಶಕ್ತಿ ಯಂತ್ರಗಳ ವಸ್ತು ಪ್ರದರ್ಶನ ಗಮನ ಸೆಳೆಯಿತು. ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ನಬಾರ್ಡ್​ ಕಾರ್ಯಕ್ರಮ ಅಧಿಕಾರಿ ಮಾಹದೇವ ಕೀರ್ತಿ, ಕೆವಿಕೆ ಮುಂದಾಳು ಡಾ. ಎಂ.ವಿ ರವಿ, ಶ್ರೀನಿವಾಸ ಕುಲಕರ್ಣಿ, ಡಾ. ಎಂ.ಪಿ ಪಾಟೀಲ್​, ಪ್ರಗತಿಪರ ರೈತ ಡಾ. ದೇವೇಂದ್ರಪ್ಪ ಬಳೂಟಗಿ, ಕೃಷಿಕ ಮಹಿಳೆಯರಾದ ಮಂಗಳ, ಗೀತಾ ಸಜ್ಜನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net