

ಕೊಪ್ಪಳ: ನೂತನ ಡಿಸಿ ಡಾ.ಸುರೇಶ ಬಿ.ಇಟ್ನಾಳ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ಕರ್ನಾಟಕದವರೇ ಆದ 2016ರ ಐಎಎಸ್ ಬ್ಯಾಚ್ ಅಧಿಕಾರಿ ಡಾ.ಸುರೇಶ ಅವರು ಈ ಮೊದಲು ಕೊಪ್ಪಳ ಎಡಿಸಿಯಾಗಿ 2014ರಲ್ಲಿ ಸೇವೆ ಸಲ್ಲಿಸಿದ್ದಾರೆ. ಬುಧವಾರ ನಿರ್ಗಮಿತ ಡಿಸಿ ನಲಿನ್ ಅತುಲ್ ಹೂ ಗುಚ್ಛ ನೀಡಿ ನೂತನ ಡಿಸಿ ಅವರನ್ನು ಸ್ವಾಗತಿಸಿದರು. ಕಂದಾಯ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಶುಭಾಶಯ ಕೋರಿದರು.
2019ರ ಐಎಎಸ್ ಬ್ಯಾಚ್ ಅಧಿಕಾರಿ ವರ್ಣಿತ್ ನೇಗಿ ಮೂಲತ@ ಛತ್ತೀಸಗಡದವರು. ಈ ಮೊದಲು ಕೊಪ್ಪಳದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ನಂತರ ಮೈಸೂರು ಆಡಳಿತ ತರಬೇತಿ ಸಂಸ್ಥೆ(ಎ.ಟಿ.ಐ) ನಲ್ಲಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿಂದ ಬೆಂಗಳೂರು ಗ್ರಾಮಾಂತರ, ಕೊಡಗು ಜಿಲ್ಲೆಗಳ ಸಿಇಒ, ಹುಬ್ಬಳ್ಳಿ ಕೆಎಚ್ಡಿಸಿ ಎಂಡಿಯಾಗಿ ಕರ್ತವ್ಯ ನಿರ್ವಹಿಸಿ ಸದ್ಯ ಕೊಪ್ಪಳ ಸಿಇಒ ಆಗಿ ನೇಮಕಗೊಂಡಿದ್ದಾರೆ.