ಕೊಪ್ಪಳ ಕೋಟೆ ವೀಕ್ಷಿಸಿದ ಡಿಸಿ

district koppal dc suresh itnal visit fort
Published on

ಕೊಪ್ಪಳ: ನಗರದ ಕೋಟೆ ಹಾಗೂ ಹುಲಿಕೆರೆಗೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಹಿಟ್ನಾಳ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ವೀಕ್ಷಿಸಿದರು.

ಬೆಳಗ್ಗೆಯೇ ಅಧಿಕಾರಿಗಳೊಂದಿಗೆ ಆಗಮಿಸಿ ಕೋಟೆ ಹತ್ತಿದರು. ಅಧಿಕಾರಿಗಳಿಂದ ಕೋಟೆ ಮಾಹಿತಿ ಪಡೆದರು. ಇತಿಹಾಸ, ಪ್ರಸ್ತುತ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕ್ರಿಯಾಯೋಜನೆ ಬಗ್ಗೆ ತಿಳಿದುಕೊಂಡರು. ಪ್ರವಾಸೋದ್ಯಮ ಇಲಾಖೆಯಿಂದ ಮ್ಯೂಸಿಯಂ, ಪುರಾತತ್ವ ಕಚೇರಿ ಆರಂಭಿಸಲು ಯೋಜಿಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಬಳಿಕ ಹುಲಿಕೆರೆಗೆ ತೆರಳಿದ ಡಿಸಿ ಕೆರೆ ಅಭಿವೃದ್ಧಿ, ನೀರಿನ ಮೂಲದ ಬಗ್ಗೆ ಪ್ರಶ್ನಿಸಿದರು. ಕೆರೆಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಲ್ಲಿ ಯೋಜನೆ ತಯಾರಿಸಲಾಗಿದೆ. ನಗಸಭೆ ಜೊತೆಗೂಡಿ ಕ್ರಿಯಾ ಯೋಜನೆ ರಚಿಸಿದ್ದು ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ವಿವರಿಸಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ.ನಾಗರಾಜ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್​, ಪುರಾತತ್ವ ಅಧಿಕಾರಿ ಶೇಜೇಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net